(ನ್ಯೂಸ್ ಕಡಬ) newskadaba.com ಮಂಗಳೂರು,ಜೂ.24: ಈಗಾಗಲೇ, ಮಂಗಳೂರಿನಲ್ಲಿ ಕೊರೋನ ಸೋಂಕಿಗೆ ಒಟ್ಟು 9 ಮಂದಿ ಬಲಿಯಾಗಿದ್ದಾರೆ. ಕಳೆದ ದಿನ ಕೊರೋನ ಸೋಂಕಿನಿಂದ ಮೃತಪಟ್ಟ 70 ವರ್ಷದ ವ್ಯಕ್ತಿಯ ಮೃತದೇಹವನ್ನು ಮಂಗಳವಾರ ಸಂಜೆ ಬೋಳಾರದ ಜುಮಾ ಮಸ್ಜಿದ್ ಆವರಣದಲ್ಲಿರುವ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ಕರಾವಳಿಯಲ್ಲಿ ಕೊರೋನಾ ಸೋಂಕು ಬೇರೆ ಬೇರೆ ಅಯಾಮಗಳಲ್ಲಿ ವಕ್ಕರಿಸುತ್ತಿದೆ. ವಯಸ್ಸಿನ ಮೀತಿಯಿಲ್ಲದೆ ಮಕ್ಕಳಿಂದ ಹಿಡಿದು ವೃದ್ದವರ ವರೆಗೆ ಆವರಿಸಿದೆ , ಬಲಿ ಪಡೆದುಕೊಳ್ತಿದೆ. ಬೋಳಾರ ಮಸೀದಿಯ ಕಮಿಟಿ ಮುಖಂಡರ ಒಪ್ಪಿಗೆಯೊಂದಿಗೆ ಸಂಜೆ ಸುಮಾರು 5:15ರ ವೇಳೆಗೆ ವಿಧಿ ವಿಧಾನದೊಂದಿಗೆ, ಕೊರೋನ ಸೋಂಕಿನಿಂದ ಮೃತಪಟ್ಟ 70 ವರ್ಷದ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಲಾಗಿದೆ.ಶಾಸಕ ಯು.ಟಿ. ಖಾದರ್ ಅವರೂ ಈ ಕಾರ್ಯದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು. ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್ ಮೃತರ ನಮಾಝ್‌ಗೆ ನೇತೃತ್ವ ನೀಡಿದ್ದರು.ಬೆಂಗಳೂರು ಮೂಲದ ಈ ವ್ಯಕ್ತಿ ಬೋಳಾರದ ಮಹಿಳೆಯನ್ನು ವಿವಾಹವಾಗಿದ್ದರು.ಈ ಮಹಿಳೆ ಮತ್ತು ಇವರ ಪುತ್ರಿಗೂ ಪಾಸಿಟಿವ್ ಬಂದಿದ್ದು, ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ.