ಡಾಂಬರು ಸಾಗಿಸುತ್ತಿದ್ದ ಲಾರಿ ಪಲ್ಟಿ ➤ ಚಾಲಕ ಪ್ರಾಣಾಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com  ಮಂಗಳೂರು ,ಜೂ.23:  ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ ಪಲ್ಕೆ ಎಂಬಲ್ಲಿ ಸೋಮವಾರ ಡಾಂಬರು ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿದೆ.

 

ಮಂಗಳೂರು ಕಡೆಯಿಂದ ಬೆಂಗಳುರು ಕಡೆಗೆ ಹೋಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸರಿದ ಲಾರಿ ಪಲ್ಟಿಯಾಗಿದೆ. ಚತುಷ್ಟಥ ಕಾಮಗಾರಿ ಹಿನ್ನಲೆಯಲ್ಲಿ ಅಗೆದು ಹಾಕಿರುವ ರಸ್ತೆ ಬದಿಯ ಹೊಂಡಕ್ಕೆ ಲಾರಿ ಬಿದ್ದು ಪಲ್ಟಿಯಾಗಿದೆ. ಸದ್ಯ ಘಟನೆಯಲ್ಲಿ ಲಾರಿ ಚಾಲಕ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಇನ್ನು ಘಟನ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

Also Read  ರೈಲಿನಲ್ಲಿ ಕಳೆದುಹೋಗಿದ್ದ 8.57 ಲಕ್ಷ ಮೌಲ್ಯದ ಚಿನ್ನವಿದ್ದ ಬ್ಯಾಗ್ ಕೊನೆಗೂ ಪತ್ತೆ

error: Content is protected !!
Scroll to Top