ಮಂಗಳೂರು, ಜೂ. 22, ಪ್ರಧಾನಮಂತ್ರಿ ಮಾತೃವಂದನಾ ಯೋಜನೆ 2018ರಿಂದ ಜಾರಿಗೆ ಬಂದಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅನುಷ್ಟಾನ ಮಾಡಲಾಗರುತ್ತದೆ. ಮೊದಲ ಬಾರಿ ಗರ್ಭಿಣಿಯರಾಗುವ ಪತ್ತಿಯೊಬ್ಬರೂ ಇದರ ಪ್ರಯೋಜನ ಪಡೆಯಬಹುದು. ಸರಕಾರಿ ನೌಕರರಾಗಿರುವ ಮಹಿಳೆಯರು ಈ ಸೌಲಭಕ್ಕೆ ಅರ್ಹರಲ್ಲ.
ಅರ್ಹ ಫಲಾನುಭವಿ ಬ್ಯಾಂಕ್ ಖಾತೆಗೆ ರೂ 5 ಸಾವಿರ ಜಮಾ ಮಾಡಲಾಗುತ್ತದೆ. 2018ಜೂನ್ 1ರಿಂದ ಅರ್ಜಿ ಸಲ್ಲಿಸಲು ಬಾಕಿ ಇರುವವರು ಕೂಡ ಅರ್ಜಿ ಸಲ್ಲಿಸಬಹುದು. ಎಪಿಎಲ್ ಪಡಿತರ ಚೀಟಿ ಇರುವವರೂ ಕೂಡ ಪ್ರಯೋಜನ ಪಡೆಯಬಹುದು. ಆಧಾರ್ರ್ ಕಾರ್ಡ್ ಕಡ್ಡಾಯ, ಅರ್ಜಿ ಸಲ್ಲಿಸಲು ಯಾವುದೇ ಆದಾಯದ ಮಿತಿ ಇರುವುದಿಲ್ಲ. ಅರ್ಜಿ ಸಲ್ಲಿಸಲು ಅರ್ಹ ಫಲಾನುಭವಿಗಳು ಸಮೀಪ ಅಂಗನವಾಡಿ ಕಾರ್ಯಕರ್ತೆಯರನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಅಥವಾ ದೂರವಾಣ ಸಂಖ್ಯೆ:0824-2432709, 2263199ನ್ನು ಸಂಪರ್ಕಿಸಬಹುದು ಎಂದು ಮಂಗಳೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಕಟಣೆ ತಿಳಿಸಿದೆ.