ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಆಯುಷ್ ಔಷಧ ವಿತರಣೆ

ಮಂಗಳೂರು, ಜೂ. 23, ದಕ್ಷಿಣಕನ್ನಡ ಜಿಲ್ಲಾ ಆಯುಷ್ ಇಲಾಖಾ ವತಿಯಿಂದ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಆಯುಷ್ ರೋಗನಿರೋಧಕ ಔಷಧಿ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮ ಉದ್ಘಾಟನೆಯನ್ನು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಶಿಶು ಅಭಿವೃದ್ಧಿ ಅಧಿಕಾರಿಗಳಾದ ಶ್ಯಾಮಲಾ, ಶೋಭಾ, ಹರೀಶ್ ಉಪಸ್ಥಿತರಿದ್ದರು. ಯೆನೆಪೋಯ ಹೋಮಿಯೋಪತಿ ಮೆಡಿಕಲ್ ಕಾಲೇಜಿನ ಹೋಮಿಯೋಪತಿ ತಜ್ಞ ಡಾ: ಶಶಿಕಾಂತ್ ಕಮ್ಮಾರ್ ಹೋಮಿಯೋಪತಿ ಔಷಧಿಯನ್ನು ಸೇವಿಸುವ ವಿಧಾನ ಹಾಗೂ ಪರಿಣಾಮದ ಬಗ್ಗೆ ಸವಿವರವಾಗಿ ವಿವರಿಸಿದರು. ಜಿಲ್ಲಾ ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ| ಸಹನಾ ಪಾಂಡುರಂಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗಳು ಹಾಗೂ ಅಧಿಕಾರಿ ಸಿಬ್ಬಂದಿಗಳಿಗೆ ಆಯುಷ್ ರೋಗನಿರೋಧಕ ಔಷಧಿಯನ್ನು ವಿತರಿಸಲಾಯಿತು.

Also Read  ಮಂಗಳೂರು: ನವೆಂಬರ್ 10 ರಿಂದ ಪ್ರೈವೇಟ್ ಚಾಲೆಂಜ್ ನ ನಾಲ್ಕನೇ ಆವೃತ್ತಿ ಆರಂಭ

error: Content is protected !!
Scroll to Top