ಜಿಲ್ಲಾ ಉಸ್ತುವರಿ ಸಚಿವರಿಂದ ವಿಪತ್ತು ನಿರ್ವಹಣಾ ಸಾಮಗ್ರಿ ಹಸ್ತಾಂತರ

(ನ್ಯೂಸ್ ಕಡಬ) newskadaba.com  ಮಂಗಳೂರು,ಜೂ.23:  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಮಳೆಗಾಲದಲ್ಲಿ ಸಂಭವಿಸಿದ ತೀವ್ರ ಹಾನಿಯನ್ನು ಮನಗಂಡು ಜಿಲ್ಲಾಡಳಿತವು ಪ್ರಸಕ್ತ ವರ್ಷದಲ್ಲಿ ಉಂಟಾಗಬಹುದಾದ ವಿಪತ್ತುಗಳನ್ನು ಎದುರಿಸಲು ಸರ್ವ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

 

ದ.ಕ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಎಂಆರ್‌ಪಿಎಲ್‌ ನೆರವಿನೊಂದಿಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿ ಕಾರವು ಖರೀದಿಸಿದ ರಕ್ಷಣಾ ಸಾಮಗ್ರಿ ಗಳನ್ನು ವಿವಿಧ ಇಲಾಖೆಗಳಿಗೆ ಸೋಮವಾರ ಹಸ್ತಾಂತರಿಸಿ ಅವರು ಮಾತನಾಡಿದರು.ವಿಪತ್ತುಗಳ ಸಂದರ್ಭದಲ್ಲಿ ಸಾರ್ವಜನಿಕರ ಜೀವಹಾನಿ ರಕ್ಷಣೆಗೆ ಯಾವುದೇ ಸಮಸ್ಯೆ ಬಾರದಂತೆ, ಮುಂಚೂಣಿ ಇಲಾಖೆಗಳಿಗೆ ರಕ್ಷಣಾ ಸಾಮಗ್ರಿಗಳನ್ನು ಖರೀದಿಸಿ ನೀಡಲಾಗುತ್ತಿದೆ. ಇದು ಕಾರ್ಯಾಚರಣೆಗೆ ಹೆಚ್ಚು ಬಲ ನೀಡಲಿದೆ ಎಂದರು.ಸಂಸದ ನಳಿನ್‌ ಕುಮಾರ್‌ ಕಟೀಲು, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ, ಶಾಸಕರಾದ ಉಮಾನಾಥ ಕೋಟ್ಯಾನ್‌, ಸಂಜೀವ ಮಠಂದೂರು, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ತುರ್ತು ಸಂದರ್ಭಗಳಲ್ಲಿ ಬಳಸಲು 6 ಬೋಟುಗಳು, 5 ಬೋಟು ಎಂಜಿನ್‌ಗಳು, ಮರ ಕತ್ತರಿಸುವ ಯಂತ್ರಗಳು, ರಾಸಾಯನಿಕ ದುರಂತ ಸಂದರ್ಭದಲ್ಲಿ ಬಳಸುವ ಮಾಸ್ಕ್ಗಳು, ಸರ್ಚ್‌ಲೈಟ್‌ಗಳು, ಸ್ಟ್ರೆಚ್ಚರ್‌ಗಳು ಸೇರಿದಂತೆ ವಿವಿಧ ರಕ್ಷಣಾ ಸಾಮಗ್ರಿಗಳನ್ನು ಜಿಲ್ಲೆಯ ಪೊಲೀಸ್‌, ಅಗ್ನಿಶಾಮಕ, ಗೃಹರಕ್ಷಕರು, ಮಹಾನಗರಪಾಲಿಕೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಹಸ್ತಾಂತರಿಸಿದರು.

Also Read  ಪತಿಗೆ ಖಾರದ ಪುಡಿ ಮಿಶ್ರಿತ ಬಿಸಿ ನೀರು ಎರಚಿದ ಪತ್ನಿ - ಪ್ರಕರಣ ದಾಖಲು

 

error: Content is protected !!
Scroll to Top