ಮಹಿಳೆಯ ಹೊಟ್ಟೆಯಲ್ಲಿ 750 ಗ್ರಾಂ ಕೂದಲ ಉಂಡೆ ► ಹೇಗೆ ಅಂತಿರಾ…???

(ನ್ಯೂಸ್ ಕಡಬ) newskadaba.com ಮುಂಬೈ,ಸೆ. 05, ತನ್ನ ಕೂದಲನ್ನು ತಾನೇ ತಿಂದಿದ್ದ ಮಹಿಳೆಯ ಹೊಟ್ಟೆಯಿಂದ ಸುಮಾರು 750 ಗ್ರಾಂ ಕೂದಲಿನ ಉಂಡೆಯನ್ನು ಮುಂಬೈ ಘಾಟ್ಕೋಪರ್ ದಲ್ಲಿನ ರಾಜವಾಡಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ.

ವಾರದ ಹಿಂದೆ, 20 ವರ್ಷದ ಮಹಿಳೆಯೋರ್ವಳು ತನಗೆ ಹಸಿವಿಲ್ಲ, ಏನೂ ತಿಂದ್ರೂ ವಾಂತಿಯಾಗುತ್ತೆ, ಹಾಗಾಗಿ ಕಳೆದ ಕೆಲ ತಿಂಗಳಿನಿಂದ ನಾನು ತುಂಬಾ ಸಣ್ಣ ಆಗ್ತಾ ಬರ್ತಿದ್ದೀನಿ ಅಂತಾ ಆಸ್ಪತ್ರೆಗೆ ಬಂದು ವೈದ್ಯರ ಬಳಿ ಬಂದಿದ್ದರು. ಆ ಸಂದರ್ಭದಲ್ಲಿ ಅವರು 30 ಕೆಜಿ ತೂಕವಿದ್ದರು.

ಅಂತೆಯೇ ವೈದ್ಯರು ಆಕೆಯನ್ನು ವೈದ್ಯಕೀಯ ತಪಾಸಣೆ ನಡೆಸಿದಾಗ ಆಕೆಯ ಹೊಟ್ಟೆಯಲ್ಲಿ ಕೂದಲಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಆಕೆಗೆ ವಾಂತಿ ಹಾಗೂ ಯಾವುದೇ ಆಹಾರ ಪದಾರ್ಥಗಳನ್ನು ತಿನ್ನಲು ಸಾಧ್ಯವಾಗುತ್ತಿರಲಿಲ್ಲ.

Also Read  ಕರ್ನಾಟಕ ಬ್ಯಾಂಕ್‌‌ನ ಮಾಜಿ ಅಧ್ಯಕ್ಷ ನಿಧನ

ಶಸ್ತ್ರ ಚಿಕಿತ್ಸೆಯ ಮೂಲಕ ಕೂದಲನ್ನು ಹೊರತೆಗೆಯದೆ ಇದ್ದಲ್ಲಿ ಪ್ರಾಣಕ್ಕೆ ಅಪಾಯವಿದೆ ಎಂದು ಅರಿತ ವೈದ್ಯರು ತಕ್ಷಣ ಆಪರೇಷನ್ ಮಾಡಿ ಕೂದಲನ್ನು ಹೊರತೆಗೆದಿದ್ದಾರೆ. ಹೊಟ್ಟೆಯೊಳಗಿದ್ದ ಕೂದಲನ್ನು ಕಂಡ ಮಹಿಳೆ ಹಾಗೂ ಆಕೆಯ ತಾಯಿ ಶಾಕ್ ಆಗಿದ್ದಾರೆ.

error: Content is protected !!
Scroll to Top