ಚೌಳಿಕೆರೆಗೆ ಬಿದ್ದ ಯುವತಿಯನ್ನ ರಕ್ಷಿಸಿದ ಯುವಕರು ➤ ಮರು ಜೀವ ನೀಡಿದ 15ರ ಬಾಲಕಿ

(ನ್ಯೂಸ್ ಕಡಬ) newskadaba.com  ಕುಂದಾಪುರ,ಜೂ.23: ಜೂನ್ 21ರಂದು ಬ್ರಹ್ಮವರದ, ಬಾರ್ಕೂರು ಚೌಳಿಕೆರೆಗೆ, ಚಾಲಕನ ನಿಯಂತ್ರಣ ಕಳೆದುಕೊಂಡು ಕಾರು ಉರುಳಿ ಬಿದ್ದಿತ್ತು. ಘಟನೆಯಲ್ಲಿ ಚಾಲಕ ಉದ್ಯಮಿ ಸಂತೋಷ್ ಶೆಟ್ಟು ಎಂಬುವವರು ಮೃತಪಟ್ಟಿದ್ದಾರೆ. ಘಟನೆ ನಡೆದ ತಕ್ಷಣ ಸ್ಥಳೀಯ ಯುವಕರು, ತಮ್ಮ ಪ್ರಾಣದ ಹಂಗು ತೊರೆದು ಚೌಳಿಕೆರೆಗೆ ಧುಮುಕಿ ಕಾರಿನಲ್ಲಿದ್ದ ಇಬ್ಬರನ್ನು ಮೇಲಕ್ಕೆತ್ತಿದ್ದಾರೆ.

 

ಸ್ಥಳೀಯ ಯುವಕರಾದ ಪ್ರದೀಪ್ ದೇವಾಡಿಗ ಮತ್ತು ಪ್ರವೀನ್ ಪೂಜಾರಿ ಹಿಂದೆ ಮುಂದೆ ನೋಡದೆ, ಕೆರೆಗೆ ಜಿಗಿದಿದ್ದಾರೆ. ಯುವತಿಗೆ ಮರು ಜೀವ ನೀಡಿದ್ದಾರೆ. ಆದರೆ, ಅದಾಗಲೇ ಉದ್ಯಮಿಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಯುವತಿಯನ್ನ ಕೆರೆಯಿಂದ ಮೇಲಕ್ಕೆತ್ತಿದ್ದಾರೆ. ಬಳಿಕ ಯುವತಿಗೆ ಪ್ರಥಮ ಚಿಕಿತ್ಸೆ ನೀಡಿದ್ದು 15ರ ಹರೆಯದ ಬಾಲಕಿ. 15 ವರ್ಷದ ನಮನಾ ಎಂಬಾಕೆ ಯುವತಿ ಶ್ವೇತಾಳಿಗೆ ತನ್ನಿಂದಾದ ಪ್ರಯತ್ನಗಳನ್ನ ನಡೆಸಿದ್ದಾಳೆ. ನೀರಿನಿಂದ ಮೇಲಕ್ಕೆತ್ತಿದ್ದ ಬಳಿಕ ಯುವತಿಗೆ ಪ್ರಥಮ ಚಿಕಿತ್ಸೆ ನೀಡಿದ್ದು, ಈ ಮೂಲಕ ರಕ್ಷಣಾ ಕಾರ್ಯಕ್ಕೆ ಮುಂದಾದ, ಯುವಕರಾದ ಪ್ರದೀಪ್ ದೇವಾಡಿಗ ,ಪ್ರವೀನ್ ಪೂಜಾರಿ ,ನಮನಾ ಹಾಗೂ ಸ್ಥಳೀಯ ನಿವಾಸಿಗಳಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

Also Read  ಡಿ.03: ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಪ್ರತಿಭೋತ್ಸವ ► ಮರ್ಕಝ್ ರೂಬಿ ಜುಬಿಲಿ ಪ್ರಚಾರ ಸಮ್ಮೇಳನ

 

error: Content is protected !!
Scroll to Top