ಮೂಡಬಿದಿರೆ ಘಟಕದಲ್ಲಿ ವನಮಹೋತ್ಸವ ಆಚರಣೆ ► ಕವಾಯತು ವೀಕ್ಷಣೆ

(ನ್ಯೂಸ್ ಕಡಬ) newskadaba.com ಕಡಬ,ಸೆ.06, ಮೂಡಬಿದಿರೆ ಘಟಕದ ಗೃಹರಕ್ಷಕರಿಂದ ವನಮಹೋತ್ಸವ ದಿನಾಚರಣೆಯನ್ನು ಮೂಡಬಿದಿರೆ ಘಟಕದ ವತಿಯಿಂದ ಆಚರಿಸಲಾಯಿತು.

ಸಮಾದೇಷ್ಟರಾದ ಡಾ| ಮುರಲೀ ಮೋಹನ್ ಚೂಂತಾರು ರವರು ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಬಳಿಕ ಘಟಕಕ್ಕೆ ಭೇಟಿ ನೀಡಿ ಕವಾಯತು ವೀಕ್ಷಣೆ ಹಾಗೂ ಪ್ರಾಕೃತಿಕ ವಿಕೋಪಗಳಲ್ಲಿ ನಡೆಯುವ ತೊಂದರೆಯ ಬಗ್ಗೆ ಚರ್ಚಿಸಿದರು.

ಪ್ರತಿಯೊಬ್ಬ ಪ್ರಜೆಯು ಗಿಡ ಬೆಳೆಸಿದಲ್ಲಿ ಪರಿಸರ ಸಂರಕ್ಷಣೆಯಾಗುತ್ತದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಮೂಡಬಿದಿರೆ ಘಟಕದ ಘಟಕಾಧಿಕಾರಿ ಶ್ರೀ ಪಾಂಡಿರಾಜ್ ಹಾಗೂ ಮೂಡಬಿದಿರೆ ಘಟಕದ ಗೃಹರಕ್ಷಕರು ಉಪಸ್ಥಿತರಿದ್ದರು.

Also Read  ಮುದ್ದು ಕಂದಮ್ಮನನ್ನು ಮನೆಯಲ್ಲಿ ಬಿಟ್ಟು ►ಮಹಿಳೆಯೊಂದಿಗೆ ಪರಾರಿಯಾದ ಗೃಹಿಣಿ...!!!

 

error: Content is protected !!
Scroll to Top