ಪುತ್ತೂರು ಘಟಕದಲ್ಲಿ ವನಮಹೋತ್ಸವ ಮತ್ತು ಸ್ಯಾನಿಟೈಸರ್ ವಿತರಣೆ

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ.22,. ದ.ಕ. ಜಿಲ್ಲಾ ಗೃಹರಕ್ಷಕ ದಳದ ಪುತ್ತೂರು ಘಟಕದಲ್ಲಿ ವನಮಹೋತ್ಸವ ಮತ್ತು ಸ್ಯಾನಿಟೈಸರ್ ಕಾರ್ಯಕ್ರಮವು ಆದಿತ್ಯವಾರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀಮೋಹನ ಚೂಂತಾರು ರವರು ಸಾಂಕೇತಿಕವಾಗಿ ಗಿಡ ನೆಡುವುದರ ಮೂಲಕ ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಭಾರತ-ಚೀನಾ ಗಡಿಯಲ್ಲಿ ಮಡಿದ ಯೋಧರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಮಾಡಲಾಯಿತು.

ಡಾ|| ಮುರಲೀ ಮೋಹನ ಚೂಂತಾರು ರವರು ಮಾತನಾಡಿ ಪ್ರತಿಯೊಬ್ಬ ಗೃಹರಕ್ಷಕರು ಒಂದೊಂದು ಗಿಡವನ್ನು ನೆಟ್ಟು ಚೆನ್ನಾಗಿ ಹಾರೈಕೆ ಮಾಡಿ ಬೆಳೆಸಬೇಕು, ಪರಿಸರ ನಾಶದಿಂದಾಗಿ ಕೋವಿಡ್-19 ರೋಗ ಇಂದು ವಿಶ್ವದೆಲ್ಲೆಡೆ ವ್ಯಾಪಿಸಿ ಮಾರಣ ಹೋಮ ಮಾಡುತ್ತಿದೆ. ಇದರ ಮುಂಜಾಗ್ರತೆಗಾಗಿ ಸ್ಯಾನಿಟೈಸರ್ ಮತ್ತು ಮೌತ್ ಮಾಸ್ಕ್‍ಗಳನ್ನು ಉಪಯೋಗಿಸುವಂತೆ ಎಲ್ಲಾ ಗೃಹರಕ್ಷಕರಿಗೆ ಎಂದು ಹಿತನುಡಿದರು.

ಪುತ್ತೂರು ಘಟಕದ ಎಲ್ಲಾ ಗೃಹರಕ್ಷಕರಿಗೆ ಒಂದೊಂದು ಗಿಡಗಳನ್ನು ಮತ್ತು ಸ್ಯಾನಿಟೈಸರ್‍ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಪುತ್ತೂರು ಘಟಕದ ಘಟಕಾಧಿಕಾರಿ ಶ್ರೀ ಅಭಿಮನ್ಯು ರೈ ಹಾಗೂ ಎಲ್ಲಾ ಗೃಹರಕ್ಷಕ/ಗೃಹರಕ್ಷಕಿಯರು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group