(ನ್ಯೂಸ್ ಕಡಬ) newskadaba.com ಶಿವಮೊಗ್ಗ,ಜೂ.21: ಯುವ ಉದ್ಯಮಿ ನಿವೇದನ್ ಅಡಿಕೆಯಿಂದ ಸ್ಯಾನಿಟೈಸರ್ ತಯಾರಿಸಿದ್ದಾರೆ.ಹಿಂದೆ ಅಡಿಕೆಯಲ್ಲಿ ಟೀ ಪುಡಿ ತಯಾರಿಸಿದ್ದರು. ನಂತರ ಸುಗಂಧ ದ್ರವ್ಯ, ಅಡಿಕೆ ಜ್ಯೂಸ್ ತಯಾರು ಮಾಡಿದ್ದರು. ಈಗ ಅಡಿಕೆಯಲ್ಲಿ ಸ್ಯಾನಿಟೈಸರ್ ಸಿದ್ಧಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಡಿಕೆಯಲ್ಲಿರುವ ಆಯಂಟಿ ಮೈಕ್ರೋಬಿಯಲ್ ಪದಾರ್ಥ ತೆಗೆದು, ಗ್ಯಾಲಿಕ್ ಆಯಸಿಡ್, ಟ್ಯಾನಿಚ್ ಬಳಸಿಕೊಂಡು ಸ್ಯಾನಿಟೈಸರ್ ಸಿದ್ಧಪಡಿಸಲಾಗಿದೆ. ಅದರಲ್ಲಿ ಶೇ 70ರಷ್ಟು ಆಲ್ಕೋಹಾಲ್ ಅಂಶವಿದೆ. ಯಾವುದೇ ಸಿಂಥೆಟಿಕ್ ಬಳಸದೆ ನೈಸರ್ಗಿಕವಾಗಿ ತಯಾರು ಮಾಡಲಾಗಿದೆ, ಪರಿಮಳ ಬರಲು ಕಿತ್ತಳೆ ಆಯಿಲ್ ಬಳಸಲಾಗಿದೆ ಎಂದು ನಿವೇದನ್ ವಿವರ ನೀಡಿದರು. ಆಯುಷ್ ಇಲಾಖೆಯ ಅನುಮತಿಗೆ ಕಳುಹಿಸಲಾಗಿದೆ. ಒಪ್ಪಿಗೆ ಸಿಕ್ಕರೆ ಮಾರುಕಟ್ಟೆಗೆ ಬಿಡುಗಡೆ ಮಾಢಲಾಗುವುದು ಎಂದು ಹೇಳಿದರು.