ಸುಳ್ಯದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಯೋಗ ದಿನಾಚರಣೆ

(ನ್ಯೂಸ್ ಕಡಬ) newskadaba.com. ಸುಳ್ಯ,ಜೂ.21: ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ. ಈ ಹಿನ್ನಲೆಯಲ್ಲಿ ಸುಳ್ಯ ನಗರ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಹಾಗೆಯೇ, ಸ್ವದೇಶಿ ಸಂಕಲ್ಪ ಪ್ರತಿಜ್ಞೆಯನ್ನು ಸ್ವೀಕರಿಸಲಾಯಿತು. ಯೋಗ ದಿನಾಚರಣೆ ಸಂದಭ್ದಲ್ಲಿ ಶಕ್ತಿ ಕೇಂದ್ರದ ಅಧ್ಯಕ್ಷ ಐ ಬಿ ಚಂದ್ರಶೇಖರ, ಕಾರ್ಯದರ್ಶಿ ಜಿನ್ನಪ್ಪ ಪೂಜಾರಿ, ಸಿಎ ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆ, ನಗರ ಪಂಚಾಯತ್ ಸದಸ್ಯರುಗಳಾದ ವಿನಯಕುಮಾರ್ ಕಂದಡ್ಕ, ಸುಧಾಕರ ಕುರುಂಜಿಭಾಗ್, ಬೂತ್ ಸಮಿತಿಯ ದಯಾನಂದ ಕೇರ್ಪಳ, ಸತೀಶ್ ಕೆ.ಜಿ, ಚಂದ್ರಶೇಖರ್ ಕೇರ್ಪಳ, ನಾರಾಯಣ, ಬೂಡು ರಾಧಕೃಷ್ಣ ರೈ, ಅಜಿತ್ ಕೆ.ಆರ್, ಜಗದೀಶ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Also Read  ಉಪ್ಪಿನಂಗಡಿ ಘಟಕದಲ್ಲಿ ವನಮಹೋತ್ಸವ

 

error: Content is protected !!
Scroll to Top