(ನ್ಯೂಸ್ ಕಡಬ) newskadaba.com ಮಂಗಳೂರು,ಜೂ.21: ಕೋವಿಡ್ 19 ಸಂಕಷ್ಟದಿಂದ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವಹಿವಾಟಿಗೂ ತೊಮದರೆ ಉಂಟಾಗಿದೆ. ಒಕ್ಕೂಟದಲ್ಲಿ ಹಾಲು ಶೇಖರಣೆ ಏರಿಕೆಯಾಗಿದ್ದು, ನಿತ್ಯ 5 ಲಕ್ಷ ಕೆ.ಜಿ. ಗೂ ಸಧೀಕ ಹಾಲು ಸಂಗ್ರಹಣೆಯಾಗುತ್ತಿದೆ. ಕೋವಿಡ್ -19 ರ ಸಮಸ್ಯೆಯಿಮದ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.
ಕರ್ನಾಟಕ ಹಾಲು ಮಹಾಮಂಡಳಿಗೆ ನಿತ್ಯ ಮಹಾಮಂಡಳಿಗೆ ನಿತ್ಯ 86.73 ಲಕ್ಷ ಲೀಟರ್ ಹಾಲು ಸಂಗ್ರಹನೆಯಾಗುತ್ತಿದ್ದು, ರಾಜ್ಯದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ಸುಮಾರು ಶೇ. 25 ರಷ್ಟು ಕುಸಿತವಾಗಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟಕ್ಕೆ 39.54 ಲಕ್ಷ ಲೀಟರ್ ಬಳಕೆಯಾಗುತ್ತಿದ್ದು, ನಿತ್ಯ 47.19 ಲಕ್ಷ ಲೀಟರ್ ಹಾಲನ್ನು ಹಾಲಿನ ಪುಡಿಯಾಗಿ ಪರಿವತ್ನೆ ಮಾಡಲಾಗುತ್ತಿದ್ದ. ಕೋವಿಡ್ ಪರಿಣಾಮದಿಂದ 2020-21ನೇ ಸಾಲಿನ ಪ್ರಥಮ 3 ತಿಂಗಳಲ್ಲಿ ಒಕ್ಕೂಟದ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಸುಮಾರು 25ರಷ್ಟು ಕುಸಿತವಾಗಿದ್ದು, ವಹಿವಾಟು ರೂ.30 ಕೋಟಿ ಕಡಿಮೆಯಾಗಿದೆ. ಸದ್ಯದ ಸಮಸ್ಯೆಯನ್ನು ಪರಿಹರಿಸಲು ಇದೇ 21ರಿಂದ ಹಾಲು ಉತ್ಪಾದರರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ ರೂ. 1 ಕಡಿಮೆ ಮಾಡಲಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಒಕ್ಕೂಟಕ್ಕೆ ಅಂದಾಜು ರೂ.20 ಕೋಟಿ ನಷ್ಟವಾಗುವ ಸಾಯತೆಯಿದೆ, ಎಂದು ದ. ಕ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ತಿಳಿಸಿದ್ದಾರೆ.