ಆಯ ತಪ್ಪಿ ಹಳ್ಳಕ್ಕೆ ಬಿದ್ದ ಬೈಕ್ ► ನೀರಿನ ರಭಸಕ್ಕೆ ಕೊಚ್ಚಿ ಹೋದ ಬೈಕ್ ಸವಾರ



(ನ್ಯೂಸ್ ಕಡಬ) newskadaba.com ಗದಗ,ಸೆ.05, ತುಂಬಿ ಹರಿಯುತ್ತಿದ್ದ ಹಳ್ಳಕ್ಕೆ ಆಯ ತಪ್ಪಿ ಬಿದ್ದ ಬೈಕ್ ಸವಾರನೋರ್ವ ಕೊಚ್ಚಿ ಹೋಗಿರುವ ಘಟನೆ ಗದಗ ತಾಲೂಕಿನ ಕುರ್ತಕೋಟಿ ಬಳಿ ನಡೆದಿದೆ.





ಮಳೆ ನೀರಿನಿಂದ ಹುಲಕೋಟಿ ಹಾಗೂ ಕುರ್ತಕೋಟಿ ಮಧ್ಯೆ ಇರುವ ಎರಡು ಹಳ್ಳಗಳು ತುಂಬಿ ಹರಿಯುತ್ತಿತ್ತು. ಅಂತೂರ-ಬೆಂತೂರ ನಿಂದ ಕುರ್ತಕೋಟಿ ಮಾರ್ಗವಾಗಿ ಗದಗ ಕಡೆಗೆ ಇಬ್ಬರು ಬೈಕ್‍ನಲ್ಲಿ ಬರುತ್ತಿದ್ದ ವೇಳೆ ಇಬ್ಬರು ಹಳ್ಳಕ್ಕೆ ಬಿದ್ದ ಪರಿಣಾಮ ಹಿಂಬದಿ ಸವಾರ ಹುಚ್ಚಪ್ಪ ಗುಡಿಮನಿ ಈಜಿ ಪಾರಾಗಿದ್ದಾರೆ. ಆದ್ರೆ ನೀರಿನ ರಭಸಕ್ಕೆ ವಾಹನದೊಂದಿಗೆ ಮತ್ತೋರ್ವ ಸವಾರ ಕೊಚ್ಚಿಹೊಗಿದ್ದಾರೆ.






ನೀರು ಪಾಲಾದ ಸವಾರನ ಹೆಸರು, ಸ್ಥಳ ತಿಳಿದುಬಂದಿಲ್ಲ. ಬೈಕ್‍ನ ಹಿಂದೆ ಕುಳಿತು ಬಂದ ವ್ಯಕ್ತಿ ಹುಚ್ಚಪ್ಪನಿಗೂ ನೀರು ಪಾಲಾದ ವ್ಯಕ್ತಿಗೂ ಯಾವುದೇ ಪರಿಚಯವಿಲ್ಲ. ಚಿಕ್ಕ ಗುಂಜಳ ನಿವಾಸಿ ಹುಚ್ಚಪ್ಪ ಅಪರಿಚಿತ ಬೈಕ್ ಸವಾರನಿಗೆ ಡ್ರಾಪ್ ಕೇಳಿದ್ದಾರೆ. ಆಗ ಇಬ್ಬರೂ ಒಂದೇ ಬೈಕ್‍ನಲ್ಲಿ ಬರುವಾಗ ಮಾರ್ಗಮಧ್ಯ ಇಂತಹೊದೊಂದು ಘಟನೆ ಸಂಭವಿಸಿದೆ.

ಈಜಿ ದಡ ಸೇರಿದ ಹುಚ್ಚಪ್ಪನಿಗೆ ಗಾಯಗಳಾಗಿದ್ದು, ಕುರ್ತಕೋಟಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೀರಿನಲ್ಲಿ ಕೊಚ್ಚಿಹೋದ ಬೈಕ್ ಸವಾರನಿಗಾಗಿ ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿಗಳಿಂದ ಶೋಧ ಕಾರ್ಯಾಚರಣೆ ನಡೆದಿದೆ.

 

error: Content is protected !!
Scroll to Top