(ನ್ಯೂಸ್ ಕಡಬ) newskadaba.com ಬೆಳ್ಳಾರೆ,ಜೂ.20: ಸ್ವಚ್ಚತೆಗೆ ಮೊದಲ ಆದ್ಯತೆಯನ್ನ ನೀಡುವ ನಿಟ್ಟಿನಲ್ಲಿ ಹಾಗೂ ಕಸ ವಿಲೇವಾರಿಯಾಗುವ ವೇಲೆ ಸಮಸ್ಯೆಯಾಗದಂತೆ, ತ್ಯಾಜ್ಯಗಳ ನಿರ್ವಹಣೆಗೆ ಬೆಳ್ಳಾರೆಯಲ್ಲಿ ವಿನೂತನ ಕಾರ್ಯವನ್ನ ಮಾಡಿದ್ದಾರೆ.
ಬೆಳ್ಳಾರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜದ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸುವ ನಿಟ್ಟಿನಲ್ಲಿ ಹಸಿಕಸ ಮತ್ತು ಒಣಕಸವಾಗಿ ಪ್ರತ್ಯೇಕವಾಗಿ ವಿಂಗಡಿಸಿ ತ್ಯಾಜ್ಯ ವಾಹನಕ್ಕೆ ಹಾಕುವ ಉದ್ದೇಶದಿಂದ, ಪ್ರತಿ ಅಂಗಡಿಗೆ ಮತ್ತು ಮನೆಗಳಿಗೆ ಗೋಣಿಚೀಲವನ್ನು ಕಛೇರಿ ಆವರಣದಲ್ಲಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿಬೃದ್ದಿ8 ಅಧಿಕಾರಿ , ಸಿಬ್ಬಂದಿ ವರ್ಗ, ಸಾರ್ವಜನಿಕರು ಉಪಸ್ಥಿತರಿದ್ದರು.