ಅಸಹಾಯಕ ಶಿಕ್ಷಕಿಗೆ ಎಸ್‍ಐ ಸಹಾಯ ➤ ಮಾನವೀಯತೆ ಮೆರೆದ ಪೊಲೀಸ್ ಕಮೀಷನರೇಟ್

(ನ್ಯೂಸ್ ಕಡಬ) newskadaba.com  ಮಂಗಳೂರು ,ಜೂ.19: ಮಾನವೀಯತೆಗೆ ಇನ್ನೊಂದು ಹೆಸರು ಮಂಗಳೂರು ಪೊಲೀಸ್ ಕಮೀಷನರೇಟ್ ನ ಪಣಂಬೂರು ಎಸ್ಐ ಉಮೇಶ್ ಕುಮಾರ್ ಆಗಿದ್ದಾರೆ.
ವೃತ್ತಿಯಲ್ಲಿ ಉಪನ್ಯಾಸಕಿ ಯಾಗಿದ್ದ ವಿಜಯಲಕ್ಷ್ಮಿ 59 ವಯಸ್ಸಿನ ವೃದ್ಧ ಮಹಿಳೆ ಉತ್ತರಭಾರತದಲ್ಲಿ ಯಾವುದೋ ಒಂದು ಶಾಲೆಯಲ್ಲಿ ಉಪನ್ಯಾಸಕಿಯಾಗಿ ಇದ್ದವರನ್ನು ಕೋರೋಣ ಕಾಯಿಲೆಯ ಕಾರಣದಿಂದಾಗಿ ಅಲ್ಲಿದ್ದ ನೌಕರರನ್ನು ತಮ್ಮ ತಮ್ಮ ಊರಿಗೆ ಕಳಿಸಿದ ಪರಿಣಾಮ ತಮ್ಮ ಊರಾದ ಚಿಕ್ಕಮಂಗಳೂರಿನಲ್ಲಿ ಯಾರು ಇಲ್ಲದ ಕಾರಣ ದೇವರ ಮೊರೆ ಹೋಗಿ ಧರ್ಮಸ್ಥಳಕ್ಕೆ ಬಂದು ಎರಡು ದಿನ ಇದ್ದರು.

ಅಲ್ಲಿಂದ ಮಂಗಳೂರಿಗೆ ಬಂದು ಮಂಗಳೂರಿನ ಕೆಎಸ್ಆರ್ಟಿಸಿ ಬಸ್ ಸ್ಟಾಂಡಿನಲ್ಲಿ ಸಾರ್ವಜನಿಕರಿಂದ ಮಾಹಿತಿ ಪಡೆದು ನನಗೆ ಕೆಲಸ ಬೇಕೆಂದು ಕೇಳಿದಾಗ ಅವರು ಬೈಕಂಪಾಡಿಗೆ ಹೋಗಲು ತಿಳಿಸಿದಂತೆ ಬಸ್ಸಿನಲ್ಲಿ ಬೈಕಂಪಾಡಿಗೆ ಬಂದು ಬೈಕಂಪಾಡಿಯಲ್ಲಿ ಹಲವಾರು ಕಾರ್ಖಾನೆಗಳಿಗೆ ಕೆಲಸ ಕೇಳಿದಾಗ ಯಾರು ಕೆಲಸ ಕೊಡದಿದ್ದಾಗ ಅಸಹಾಯಕತೆಯಿಂದ ಸ್ಥಳೀಯರನ್ನು ಸಂಪರ್ಕಿಸಿದಾಗ ಸ್ಥಳೀಯರು ಪೋಲೀಸ್ ಕಂಟ್ರೋಲ್ ರೂಮಿಗೆ ತಿಳಿಸಿದರು.

Also Read  ➤ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ➤ ಬಸವರಾಜ್ ಹೊರಟ್ಟಿ

 

ಕಂಟ್ರೋಲ್ ರೂಂ ನಿಂದ ಬಂದ ಮಾಹಿತಿಯಂತೆ ಉಮೇಶ್ ಕುಮಾರ್ ಅವರು ಮತ್ತು ಸಿಬ್ಬಂದಿಯವರು ಕೂಡಲೇ ಸ್ಥಳಕ್ಕೆ ಧಾವಿಸಿ ವಿಚಾರಿಸಿದಾಗ ನನಗೆ ಯಾರೂ ಕೆಲಸ ಕೊಡುವುದಿಲ್ಲ ನನ್ನನ್ನು ಧರ್ಮಸ್ಥಳಕ್ಕೆ ಕಳುಹಿಸಿ ಕೊಡಿ ಎಂದು ಬೇಡಿಕೊಂಡಾಗ ಪಿಎಸ್ಐ ಅವರು ತಮ್ಮ ಇಲಾಖಾ ಜೀಪಿನಲ್ಲಿ ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡಿಗೆ ಕರೆದುಕೊಂಡು ಹೋಗಿ ಬಿಟ್ಟಾಗ ನನಗೆ ಬಸ್ಸಿಗೆ ಹಣವಿಲ್ಲ ಅಂತ ಹೇಳಿ ಹೇಳಿದ್ದಾರೆ ಪಿಎಸ್ಐ ಅವರು ಸ್ವತಹ ನಗದು ಕೊಟ್ಟು ಕಳುಹಿಸಿ ಕೊಟ್ಟರು.

Also Read  ಕಡಬ: ದ್ವಿಚಕ್ರ - ಕೆಎಸ್ಸಾರ್ಟಿಸಿ ಬಸ್ ನಡುವೆ ಢಿಕ್ಕಿ ➤ ಮಹಿಳೆ ಸ್ಥಳದಲ್ಲೇ ಮೃತ್ಯು, ಓರ್ವ ಗಂಭೀರ

 

error: Content is protected !!
Scroll to Top