ಒಂಟಿ ಕೈಯಲ್ಲಿ ಮಾಸ್ಕ್ ಹೊಲಿದ ಬಾಲಕಿ ➤ SSLC ವಿದ್ಯಾರ್ಥಿಗಳಿಗೆ ಉಡುಪಿ ವಿದ್ಯಾರ್ಥಿನಿ ಕೊಡುಗೆ

(ನ್ಯೂಸ್ ಕಡಬ) newskadaba.com  ಉಡುಪಿ ,ಜೂ.19: SSLC ಪರೀಕ್ಷೆ ಸಂದರ್ಭ ವಿದ್ಯಾರ್ಥಿಗಳಿಗೆ ಹಂಚಲು ಸ್ಕೌಟ್ಸ್ ಆ್ಯಂಡ್ ಗೈಡ್ಸ್ 1 ಲಕ್ಷ ಮಾಸ್ಕ್ ಹೊಲಿಯುವ ಗುರಿ ಹೊಂದಿದ್ದು, ಉಡುಪಿಯ ಬಾಲಕಿಯೊಬ್ಬಳು ಒಂದೇ ಕೈಯಲ್ಲಿ 15 ಮಾಸ್ಕ್ ಹೊಲಿದುಕೊಟ್ಟು ಗಮನ ಸೆಳೆದಿದ್ದಾಳೆ.

ಕಲ್ಯಾಣಪುರ ಸಂತೆಕಟ್ಟೆಯ ಮೌಂಟ್ ರೋಸರಿ ಆಂಗ್ಲ ಮಾಧ್ಯಮ ಶಾಲೆ 6ನೇ ತರಗತಿ ವಿದ್ಯಾರ್ಥಿ ಸಿಂಧೂರಿ (10) ಹುಟ್ಟಿನಿಂದ ಮಣಿಗಂಟಿನ ಕೆಳಗೆ ಎಡಗೈ ಇಲ್ಲ. ಕಬ್ ಬುಲ್ ಬುಲ್(ಸ್ಕೌಟ್ಸ್ ಆ್ಯಂಡ್ ಗೈಡ್ಸ್) ವಿದ್ಯಾರ್ಥಿಯಾದ ಸಿಂಧೂರಿಗೆ 10 ಮಾಸ್ಕ್ ಮಾಡಿಕೊಡುವಂತೆ ಶಿಕ್ಷಕಿ ತಿಳಿಸಿದ್ದರು. ಪ್ರಾರಂಭದಲ್ಲಿ ಒಂಟಿ ಕೈಯಲ್ಲಿ ಮಾಸ್ಕ್ ಹೊಲಿಯಲು ಸಾಧ್ಯವೇ ಎಂಬ ಅಳುಕಿತ್ತು. ತಾಯಿಯ ಪ್ರೋತ್ಸಾಹದೊಂದಿಗೆ ಬಾಲಕಿಯ ಛಲ ಗುರಿ ಸಾಧನೆಗೆ ನೆರವಾಗಿದೆ. ಈ ಕಾರ್ಯಕ್ಕೆ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

”ಮಾಸ್ಕ್ ಹೊಲಿಗೆ ಈಗ ಸಲೀಸಾಗಿದೆ. ಈಗ ಒಂದು ಮಾಸ್ಕ್ ಹೊಲಿಯಲು ಐದು ನಿಮಿಷ ಸಾಕು. ಕರೊನಾ ವಿರುದ್ಧದ ಹೋರಾಟದಲ್ಲಿ ನನ್ನ ಅಳಿಲಸೇವೆ ಸಲ್ಲಿಸಿದ ತೃಪ್ತಿಯಿದೆ. ನೆರೆಹೊರೆಯವರಿಗೂ ಮಾಸ್ಕ್ ಹೊಲಿದು ಕೊಡುವ ಇಚ್ಛೆಯಿದೆ. ಟೀಚರ್ ಆಗಬೇಕೆನ್ನುವ ಆಸೆಯಿದೆ. ಡ್ರಾಯಿಂಗ್ ನನ್ನ ಇಷ್ಟದ ಹವ್ಯಾಸ” ಎಂದು ತಮ್ಮ ಸಂತಸ ವನ್ನ ಈ ಪೋರಿ ವ್ಯಕ್ತಪಡಿಸಿದ್ದಾರೆ
– ಸಿಂಧೂರಿ, ವಿದ್ಯಾರ್ಥಿನಿ

 

error: Content is protected !!

Join the Group

Join WhatsApp Group