(ನ್ಯೂಸ್ ಕಡಬ) newskadaba.com ಮಲ್ಪೆ ,ಜೂ.19: ಸಾಮಾನ್ಯವಾಗಿ ಕರಾವಳಿಯಲ್ಲಿ ಯಾಂತ್ರಿಕ ಮೀನುಗಾರಿಕೆ ನಿಷೇಧದ ಸಂದರ್ಭದಲ್ಲಿ ಒಣ ಮೀನಿನ ಸಾರು ಪರ್ಯಾಯವಾಗಿ ಹಸಿಮೀನಿನ ಸ್ಥಾನವನ್ನು ತುಂಬುತ್ತದೆ. ಈ ಬಾರಿ ಆರಂಭದಿಂದ ಕಾಡಿದ ಚಂಡಮಾರುತ, ಮೀನಿನ ಕ್ಷಾಮ, ಮಾರ್ಚ್ ಬಳಿಕ ಕೊರೊನಾ ಲಾಕ್‌ಡೌನ್‌ನಿಂದಾಗಿ ಸರಿಯಾದ ಮೀನುಗಾರಿಕೆ ಇಲ್ಲದೆ ಮಳೆಗಾಲ ಪೂರ್ವದ 3 ತಿಂಗಳ ವ್ಯವಹಾರ ಆಗದಿರು ವುದು ಒಣಮೀನಿನ ವ್ಯಾಪಾರದ ಮಹಿಳೆ ಯರಿಗೆ ದೊಡ್ಡ ಹೊಡೆತವಾಗಿದೆ. ಪರಿಣಾಮವಾಗಿ ಒಣಮೀನಿನ ದಾಸ್ತಾನಿಲ್ಲದೆ ಲಾಕ್‌ಡೌನ್ ಅನಂತರದ ದಿನಗಳಲ್ಲಿ ಮೀನಿನ ಲಭ್ಯತೆ ಇಲ್ಲದೆ ದರ ಮತ್ತಷ್ಟು ಹೆಚ್ಚಳವಾಗಿದೆ.
ಪ್ರಸ್ತುತ ಮೀನು ಮಾರುಕಟ್ಟೆಯಲ್ಲಿ ಒಣಮೀನು ಬೆಲೆ ಗಗನಕ್ಕೇರಿದ್ದು, ಒಂದು ಕೆ.ಜಿ.ಗೆ 150 ರೂ. ಇದ್ದ ಗೊಲಾಯಿ ಮೀನು ಇದೀಗ ಮಾರುಕಟ್ಟೆಯಲ್ಲಿ 600 ರೂ. ಗೆ ಮಾರಾಟವಾಗುತ್ತಿದೆ. ಅದರಂತೆ ಕೆ.ಜಿ.ಗೆ 300 ರೂ. ಇದ್ದ ಅಡೆಮೀನಿಗೆ 900 ರೂ. ಆಗಿದೆ. ಕೆ.ಜಿ.ಗೆ 50 ರೂ. ಇದ್ದ ಕುರ್ಚಿ, ಪಾಂಬೊಲ್‌ಗೆ 150 ರೂ., 80 ರೂ. ಇದ್ದ ಆರಣೆ ಮೀನು 170ಕ್ಕೆ ಮಾರಾಟ ವಾಗುತ್ತಿದೆ. 100 ರೂ.ಯ ನಂಗ್ ಮೀನಿಗೆ 400 ರೂ. ಇದೆ. 4 ರೂ. ಗೆ ಮಾರಾಟವಾಗು ತ್ತಿದ್ದ ಮದ್ಯಮ ಗಾತ್ರ ಒಂದು ಬಂಗುಡೆ ಮೀನಿಗೆ ಈಗ 20ರೂ. ಆಗಿದೆ. ಕಲ್ಲರ್ 70ರಿಂದ 400 ರೂ. ಗೆ ಏರಿಕೆಯಾಗಿದೆ.