ಮಾನಸಿಕ-ದೈಹಿಕವಾಗಿ ಹಿಂಸೆ ➤ ಕಾನ್ ಸ್ಟೇಬಲ್ ವಿರುದ್ಧ ಪತ್ನಿ ದೂರು

(ನ್ಯೂಸ್ ಕಡಬ) newskadaba.com ಪುತ್ತೂರು ,ಜೂ.18:  ತನಗೆ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿರುವುದಾಗಿ ಆರೋಪಿಸಿ, ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಕಾನ್ ಸ್ಟೇಬಲ್ ಪತ್ನಿ ನೀಡಿದ ದೂರಿನಂತೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 


ಇನ್ನು, 5 ತಿಂಗಳ ಹಿಂದೆಯಷ್ಟೆ ಸಬ್ ರಿ ಜಿಸ್ಟ್ರಾರ್ ಕಚೇರಿಯಲ್ಲಿ ಇವರಿಬ್ಬರ ವಿವಾಹ ನೋಂದಣಿ ನಡೆದಿತ್ತು. ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಕಾನ್ ಸ್ಟೇಬಲ್ ಶಾಂತಕುಮಾರ್ ಅವರ ಪತ್ನಿ ಅಶ್ವಿನಿ ಶಾರದಾ (27) ಅವರು, ದೈಹಿಕ ಮತ್ತು ಮಾನಸಿಕ ಹಿಂಸೆಗೊಳಗಾಗಿರುವುದಾಗಿ ದೂರು ನೀಡಿದವರು.ಪ್ರೀತಿಸಿ ನಾವಿಬ್ಬರು ವಿವಾಹ ಆಗಿದ್ದೆವು.ಬಳಿಕ ಪತಿ ಕ್ಷುಲ್ಲಕ ಕಾರಣಕ್ಕೆ ವಿವಾದ ಹುಟ್ಟುಹಾಕಿ ಹಿಂಸೆ ನೀಡುತ್ತಿರುವುದಾಗಿ ಆರೋಪಿಸಿದ್ದಾರೆ.¸ಸದ್ಯ, ಸಂಪ್ಯ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.

Also Read  11 ವರ್ಷಗಳ ಹಿಂದಿನ ಲೈಂಗಿಕ ಕಿರುಕುಳ ಪ್ರಕರಣದ ತೀರ್ಪು ಪ್ರಕಟ - ಕಡಬದ ಯುವಕನಿಗೆ ಮೂರುವರೆ ವರ್ಷ ಜೈಲುಶಿಕ್ಷೆ ಪ್ರಕಟ

error: Content is protected !!
Scroll to Top