ಕಡಬ: ರೈಲಿನಿಂದ ನದಿಗೆ ಯುವತಿ ಹಾರಿದ್ದಾಳೆಂಬ ಶಂಕೆ ► ಸುಳ್ಳು ಸುದ್ದಿಯಿಂದ ಹುಡುಕಾಡಿ ಬೇಸ್ತು ಬಿದ್ದ ನಾಗರೀಕರು

(ನ್ಯೂಸ್ ಕಡಬ) newskadaba.com ಕಡಬ, ಸೆ.04. ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ರೈಲಿನಿಂದ ಯುವತಿಯೋರ್ವಳು ಕೋಡಿಂಬಾಳ ಸಮೀಪದ ನಾಕೂರು ಎಂಬಲ್ಲಿ ಕುಮಾರಧಾರಾ ನದಿಗೆ ಹಾರಿದ್ದಾಳೆಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ನಾಗರೀಕರು ನದಿತಟದಲ್ಲಿ ಹುಡುಕಾಡಿದ ಘಟನೆ ಸೋಮವಾರದಂದು ನಡೆದಿದೆ.

ಯುವತಿಯೋರ್ವಳು ರೈಲಿನಿಂದ ಹಾರಿದ್ದು, ತದನಂತರ ಬೋಗಿಯಲ್ಲಿದ್ದ ಯುವಕನು ಚೈನು ಎಳೆದು ರೈಲನ್ನು ನಿಲ್ಲಿಸಿ ಪರಾರಿಯಾಗಿದ್ದಾನೆ ಎಂದು ಯಾರೋ ಸುಳ್ಳು ಸುದ್ದಿ ಹಬ್ಬಿಸಿದ ಕಾರಣ ನಾಗರೀಕರನ್ನು ಆತಂಕಕ್ಕೀಡುಮಾಡಿದ್ದು, ಊರವರು ಸ್ಥಳದಲ್ಲಿ ಜಮಾಯಿಸಿದ್ದಾರೆ. ವಿಷಯ ತಿಳಿದು ಕಡಬ ಪೊಲೀಸರು, ಮಾಧ್ಯಮದವರು ಸ್ಥಳಕ್ಕೆ ಭೇಟಿ ನೀಡಿ ನದಿಯ ಕೂಗಳತೆ ದೂರದಲ್ಲಿರುವ ರೈಲ್ವೇ ಗೇಟ್ ಸಿಬ್ಬಂದಿಯಲ್ಲಿ ಈ ಬಗ್ಗೆ ವಿಚಾರಿಸಿದಾಗ ಅವರೂ ಅಂತೆ ಕಂತೆಗಳ ಸುದ್ದಿಗಳನ್ನೇ ತಿಳಿಸಿದ್ದಾರೆ. ಆದರೆ ಸ್ಪಷ್ಟ ಮಾಹಿತಿ ಯಾರಿಂದಲೂ ಸಿಗದಿದ್ದಾಗ ಮಂಗಳೂರಿನ ರೈಲ್ವೇ ಪೊಲೀಸರನ್ನು ಸಂಪರ್ಕಿಸಿದಾಗ ಅಂತಹ ಯಾವುದೇ ಘಟನೆಗಳು ನಡೆದಿಲ್ಲ. ಇದು ಯಾರೋ ಕಿಡಿಗೇಡಿಗಳು ಹಬ್ಬಿಸಿರುವ ಸುಳ್ಳು ಸುದ್ದಿಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ ಸುಳ್ಳು ಸುದ್ದಿಯಿಂದಾಗಿ ತಮ್ಮ ಕೆಲಸಗಳನ್ನು ಬಿಟ್ಟು ನದಿ ತಟದಲ್ಲಿ ಸೇರಿದ್ದ ಊರವರು ಸಮಾಧಾನದ ನಿಟ್ಟುಸಿರು ಬಿಟ್ಟರು.

error: Content is protected !!
Scroll to Top