(ನ್ಯೂಸ್ ಕಡಬ) newskadaba.com ಪುತ್ತೂರು,ಜೂ.18: ಕೊರೋನಾ ಸೋಂಕು ಈಗಾಗಲೇ, ಕರಾವಳಿಯ ಜರನ ನಿದ್ದೆಗೆಡಿಸಿದೆ. ಇದರ ಜೊತೆಗೆ ಕರಾಔಳಿಯಲ್ಲಿ ಡೆಂಗ್ಯೂ ಹಾವಳಿ ಹೆಚ್ಚಾಗುತ್ತಿದೆ. ಪುತ್ತೂರು ತಾಲೂಕಿನಲ್ಲಿ ಡೆಂಗ್ಯೂ ಜ್ವರ ಬಾಧಿತರ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಿದ್ದು, ಜನತೆ ಆತಂಕಗೊಂಡಿದ್ದಾರೆ. ಗ್ರಾ. ಪಂ, ಸದಸ್ಯರೋರ್ವರ ಸಹಿತ ಶಂಕಿತ ಡೆಂಗ್ಯೂ ಬಾಧಿತರು 143 ಆಸ್ಪತ್ರೆಗಳಲ್ಲಿ ಒಳರೋಗಿಗಳಾಗಿ ದಾಖಲಾಗಿದ್ದಾರೆ.
ಡೆಂಗ್ಯೂ ಜ್ವರ ಕೊರೋನಾದಿಂದಲೂ ಅಪಾಯಕಾರಿಯಾಗಿದ್ದು, ತಾಲೂಕಿನಲ್ಲಿ ಇಲಾಖೆ ವರದಿಯ ಪ್ರಕಾರ ಮೂರು ಕೇಸ್ ಮಾತ್ರ ಡೆಂಗ್ಯೂ ಆ ಗಿದ್ದು. ಉಳಿದಂತೆ ಎಲ್ಲವೂ ಶಂಕಿತ ಪ್ರಕರಣ ಎಂದು ಹೇಳಾಲಾಗುತ್ತಿದೆ. ಆದರೆ ಖಾಸಗಿ ಆಸ್ಪತ್ರೆಗಳ ಮಾಹಿತಿ ಪ್ರಕಾರ, ಡೆಂಗ್ಯೂ ಪ್ರಕರಣ ಹೆಚ್ಚುತ್ತಿದೆ. ಕಳೆದೊಂದು ವಾರದಲ್ಲಿ 200ಕ್ಕೂ ಹೆಚ್ಚು ಮಂದಿ ಡೆಂಗ್ಯೂ ಜ್ವರದಿಂದ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುತ್ತೂರಿನ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಬರೋಬ್ಬರಿ 120ಕ್ಕೂ ಅಧೀಕ ಮಂದಿ ರೋಗಿಗಳು ಒಳರೋಗಿಗಳಾಗಿ ದಾಖಲಾಗಿದ್ದಾರೆ. ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ 60 ಮಂದಿ, ಧವ್ವಂತರಿ ಆಸ್ಪತ್ರೆಯಲ್ಲಿ 12 ಮಂದಿ, ಚೇತಾನ ಆಸ್ಪತ್ರೆಯಲ್ಲಿ 22 ಮಂದಿ , ಹಿತಾ ಆಸ್ಪತ್ರೆಯಲ್ಲಿ 2 ಮಂದಿ, ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ 5 ಮಂದಿ , ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ 10 ಮಂದಿ, ಡೆಂಗ್ಯೂ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ಜತೆಗೆ ಉಪ್ಪಿನಂಗಡಿ, ಕಡಬ, ವಲಯದ ವ್ಯಾಪ್ತಿಯಲ್ಲು ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವುದು ಕಂಡು ಬರುತ್ತಿದೆ.