ಉಡುಪಿ: ಕೊರೊನಾ ಸೋಂಕಿತೆಗೆ ಸಿಜೇರಿಯನ್ ಮೂಲಕ ಹೆರಿಗೆ

(ನ್ಯೂಸ್ ಕಡಬ) newskadaba.com ಉಡುಪಿ, ಜೂ.18,. ಕೊರೊನಾ ಸೋಂಕಿತೆಗೆ ಸಿಜೇರಿಯನ್ ಮೂಲಕ ಯಶಸ್ವಿ ಹೆರಿಗೆಯಾದ ಘಟನೆ ಉಡುಪಿಯಲ್ಲಿ ನಡೆದಿದೆ.

ಕಾರ್ಕಳ ಮೂಲದ ಈ ಮಹಿಳೆಯನ್ನು ಜೂನ್ 16 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಹಾರಾಷ್ಟ್ರದಿಂದ ಬಂದವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 22 ವರ್ಷದ ಗರ್ಭಿಣಿಗೆ ಉಡುಪಿಯ ಟಿಎಂಎಪೈ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ  ಯಶಸ್ವಿ ಹೆರಿಗೆ ಮಾಡಿಸಿದ್ದಾರೆ.

ಇದು ರಾಜ್ಯದ ಇತಿಹಾಸದಲ್ಲಿ ಪ್ರಥಮ ಸಿಜೇರಿಯನ್ ಹೆರಿಗೆಯಾಗಿದ್ದು, ಬಾಣಂತಿ ಹಾಗೂ ಮಗು ಆರೋಗ್ಯವಾಗಿದ್ದಾರೆ.

Also Read  ಇಚಿಲಂಪಾಡಿ: ಬೈಕ್ ಸ್ಕಿಡ್ ಆಗಿ ಸವಾರ ಗಂಭೀರ


ಇದೀಗ ಬಾಣಂತಿ ಕೊರೋನಾದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕೋವಿಡ್ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.

error: Content is protected !!
Scroll to Top