ಆಯುಷ್‌ನಿಂದ ರೋಗನಿರೋಧಕ ಔಷಧ ವಿತರಣೆ

(ನ್ಯೂಸ್ ಕಡಬ) newskadaba.com ಮಂಗಳೂರು,ಜೂ.17: ದಕ್ಷಿಣ ಕನ್ನಡ ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಪತ್ರಕರ್ತರಿಗೆ ರೋಗ ನಿರೋಧಕ ಔಷಧ ವಿತರಣೆ, ಗ್ರಾಮೀಣ ಕೂಟ ಸಂಸ್ಥೆ ವತಿಯಿಂದ ಪತ್ರಕರ್ತರಿಗೆ ಮಾಸ್ಕ್ ಹಾಗೂ ಸ್ಯಾನಿಟೈಜರ್ ವಿತರಣಾ ಸಮಾರಂಭ ನಗರದ ಪತ್ರಿಕಾಭವನದಲ್ಲಿ ಸೋಮವಾರ ನಡೆಯಿತು. ಪತ್ರಕರ್ತರಿಗೆ ಔಷಧ, ಮಾಸ್ಕ್, ಸ್ಯಾನಿಟೈಜರ್ ವಿತರಿಸಿ ಮಾತನಾಡಿದ ಶಾಸಕ ಡಿ. ವೇದವ್ಯಾಸ ಕಾಮತ್, ಕೊರೋನಾ ವಾರಿಯರ್ಸ್‌ಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧ ವಿತರಣೆ ಮಾಡುವ ಮೂಲಕ ಆಯುಷ್ ಇಲಾಖೆ ಉತ್ತಮ ಕಾರ್ಯ ನಡೆಸಿದೆ.

 

ಪತ್ರಕರ್ತರು ಜನರ ನಡುವೆ, ಜನಸಂದಣಿ ಇರುವಲ್ಲಿಗೆ ತೆರಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪತ್ರಕರ್ತರೂ ಮುನ್ನೆಚ್ಚರಿಕೆ ವಹಿಸಿ, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಆಯುಷ್ ಇಲಾಖೆ ಔಷಧ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು. ಜಿಲ್ಲಾ ಆಯುಷ್ ಅಧಿಕಾರಿ ಡಾ. ಮಹಮ್ಮದ್ ಇಕ್ಬಾಲ್ ಮಾತನಾಡಿ, ಆಯುಷ್ ಇಲಾಖೆ ವತಿಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧವನ್ನು 50 ಸಾವಿರ ಮಂದಿ ಮುಂಚೂಣಿ ಕಾರ್ಯಕರ್ತರಿಗೆ ವಿತರಿಸಲಾಗುತ್ತಿದೆ. ಸೋಮವಾರ ಪತ್ರಕರ್ತರಿಗೆ ಮತ್ತು ಕೆಎಸ್‌ಆರ್‌ಟಿಸಿಯ 4 ಸಾವಿರ ಸಿಬ್ಬಂದಿಗೆ ಔಷಧ ವಿತರಿಸಲಾಗಿದೆ. ಮುಂದಕ್ಕೆ ಇಲಾಖೆಯಿಂದ ಪಂಚಾಯತ್ ಮಟ್ಟದಲ್ಲಿ ವಿತರಿಸಲಾಗುವುದು. ಔಷಧ ವಿತರಣೆಯಲ್ಲಿ ವೃದ್ಧರ ಸಹಿತ ದುರ್ಬಲ ವರ್ಗದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.

Also Read  ಮಂಗಳೂರು : ಬಾಂಬ್ ಸ್ಪೋಟ - ಸಂತ್ರಸ್ತ ಚಾಲಕನ ಮನೆ ದುರಸ್ತಿಗೆ ನೆರವು

 

ಸಾರ್ವಜನಿಕರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧ ಅಗತ್ಯವಿದ್ದಲ್ಲಿ ಮಂಗಳೂರಿನ ಹ್ಯಾಟ್‌ಹಿಲ್ ಹಾಗೂ ಜಿಲ್ಲೆಯ ವಿವಿಧ ಕಡೆ ಇರುವ ಆಯುಷ್ ಆಸ್ಪತ್ರೆ ಸಂಪರ್ಕಿಸಬಹುದು ಎಂದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಆಯುಷ್ ಇಲಾಖೆಯ ಡಾ. ಶೋಭಾರಾಣಿ, ಡಾ. ಸಹನಾ ಉಪಸ್ಥಿತರಿದ್ದರು. ಮಹಮ್ಮದ್ ಆರೀಫ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು.

Also Read  ಕನ್ನಡದ ಹಿರಿಯ ಪತ್ರಕರ್ತ ವಸಂತ ನಾಡಿಗೇರ ಮೃತ್ಯು

 

 

error: Content is protected !!
Scroll to Top