(ನ್ಯೂಸ್ ಕಡಬ) newskadaba.com ಮಂಗಳೂರು,ಜೂ.17: ಕರಾವಳಿಗೆ ಮುಂಗಾರು ಕಾಲಿಟ್ಟ ಪರಿಣಾಮ, ಮಳೆಯ ಅಬ್ಬರಕ್ಕೆ ಅಲ್ಲಲ್ಲಿ ಹಾನಿ ಹೆಚ್ಚಾಗುತ್ತಿದೆ. ಕರವಾಳಿಯಲ್ಲಿ ಎಂದಿನಂತೆ ಮಂಗಳವಾರವೂ ಭಾರಿ ಗಾಳಿ ಮಳೆ ಅಬ್ಬರಿಸಿದೆ. ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.
ಮಂಗಳೂರು ನಗರದಲ್ಲಿ ಬೆಳಗ್ಗಿನಿಂದ ಬಿಟ್ಟು, ಬಿಟ್ಟು ಮಳೆಯಾಗಿತ್ತು.ಉಳಿದಂತೆ ಮೋಡ ಕವಿದ ವಾತವಾರಣವಿತ್ತು. ಬೆಳಗ್ಗೆ ಸುರಿದ ಭಾರೀ ಮಳೆಗೆ ನಗರದ ತಗ್ಗು ಪ್ರದೇಶಗಳಲ್ಲಿ ನಿರು ನಿಂತಿತ್ತು. ಕಡಬ, ಸುಬ್ರಹ್ಮಣ್ಯ, ಸುಳ್ಯ, ಉಪ್ಪಿನಂಗಡಿ, ಬೆಳ್ತಂಗಡಿ, ಬಂಟ್ವಾಳ, ಧರ್ಮರ್ಸಥಳ, ಉಳ್ಳಾಲ ಸೇರಿದಂತೆ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.
ಪಡುಬಿದ್ರಿ ಭಾಗಗಳಲ್ಲಿ ಕೃತಕ ನೆರೆ ನೀರು ನುಗ್ಗಿದೆ. ಈಗಾಗಲೇ ಕಾಸರಗೋಡುವಿನಲ್ಲಿ ಎಲ್ಲೋ ಅಲರ್ಟ್ ಘೋಷಣೆಯಾಗಿದೆ. ಸಿದ್ದಾಪುರ ವ್ಯಾಪ್ತಿಯಲ್ಲಿ ದನದ ಕೊಟ್ಟಿಗೆಯ ಮೇಲೆ ಹಲಸಿನ ಮರ ಬಿದ್ದ ಪರಿಣಾಮ ಹಟ್ಟಿ ಭಾಗಶ: ಜಖಂಗೊಂಡಿದೆ.