(ನ್ಯೂಸ್ ಕಡಬ) newskadaba.com ಪುತ್ತೂರು,ಜೂ.16: ಕೊರೋನಾ ಅಬ್ಬರಕ್ಕೆ ಶಾಲಾ ಕಾಲೇಜುಗಳು ಸ್ಥಗಿತಗೊಂಡಿದೆ. ಇದರಿಂದಾಗಿ ಎಸ್.ಎಸೆ ಎಲ್ ಸಿ ಪರೀಕ್ಷೆ, ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆಯು ಕೊರೋನಾ ದಿಂದಾಗಿ ದೇಶದಲ್ಲಿ ಲಾಕ್ ಡೌನ್ ಘೋಷಣೆಯಾದ ಪರಿಣಾಮವಾಗಿ ಪರೀಕ್ಷೆಗೆ ತೊಡಕು ಉಂಟಾಗಿತ್ತು. ಅದರ ಜೊತೆಗೆ, ಕೊನೆಯ ಪರೀಕ್ಷೆಗೆ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಸಿದ್ದತೆಯನ್ನು ನಡೆಸಿದ್ದರು.
ಆದರೆ, ಲಾಕ್ ಡೌನ್ ಸಮಸ್ಯೆಯನ್ನು ಎದುರಿಸಿದ ಸಂದರ್ಭದಲ್ಲಿ ಇಂಗ್ಲೀಷ್ ಪರೀಕ್ಷೆಯನ್ನು ಕಡ್ಡಾಯವಾಗಿ ಮುಂದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗಾ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯು, ಪರೀಕ್ಷೆಯನ್ನು ನಡೆಸಲು ಅನುಮತಿ ನೀಡಿದ್ದು, ಜೂ. 18 ರಂದು ರಾಜ್ಯಾಧ್ಯಂತ ಈಗಾಗಲೇ ಸೂಚಿಸಿದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದೆ. ಅದರಂತೆ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಕೂಡ ಪರೀಕ್ಷೆಯು ನಡೆಯಲಿರುವುದರಿಂದ ಎಲ್ಲಾ ತರಗತಿ ಕೊಠಡಿಗಳಿಗೆ, ಹೊರಾಂಗಣಗಳಿಗೆ ಸ್ಯಾನಿಟೈಸರ್, ಯಂತ್ರದ ಮೂಲಕ ಸಿಂಪಡಿಸಿ ಶುದ್ದಗೊಳಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ. ಜತೆಗೆ ಮಾಸ್ಕ್ , ಪ್ರತಿಯೊಬ್ಬ ವಿದ್ಯಾರ್ಥಿಯ ದೇಹದ ಉಷ್ಣತೆಯನ್ನು ತೋರಿಸುವ ಥರ್ಮೋಮೀಟರ್ ನ್ನು, ಕಾಲೇಜಿನಲ್ಲಿ ಅಳವಡಿಸಲಾಗಿದೆ. ಪ್ರಾಂಶುಪಾಲ ಮಹೇಶ್ ನಿಟಿಲಾಪುರರವರ ನೇತೃತ್ವದಲ್ಲಿ ಕಾಲೇಜು ಆಡಳಿತ ವಿಭಾಗದ ಸಿಬ್ಬಂದಿಗಳು ಶುದ್ದತೆ, ಸ್ವಚ್ಚತೆಯ ಕಾರ್ಯದಲ್ಲಿ ತೊಡಗಿದ್ದಾರೆ.