ಕುಕ್ಕೆ ದೇವಾಲಯ ಹಾಗೂ ಧರ್ಮಸ್ಥಳಕ್ಕೆ ಶಾಸಕ ಶ್ರೀ ಈಶ್ವರ್ ಖಂಡ್ರೆ ಭೇಟಿ

(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ಯಹ್ಮಣ್ಯ,ಜೂ.16: ಕರ್ನಾಟಕ ಕಾಂಗ್ರೆಸಿನ ಉನ್ನತ ಮಟ್ಟದ ಪ್ರಬಲ ನಾಯಕರು, ಬೀದರ್ ಜಿಲ್ಲೆಯ ಭಾಲ್ಕಿಯ ಶಾಸಕರು, ರಾಜ್ಯ ಹಸ್ತಪಕ್ಷದ ಕಾರ್ಯಾಧ್ಯಕ್ಷರೂ ಆಗಿರುವ ಶ್ರೀ ಈಶ್ವರ್ ಖಂಡ್ರೆಯವರು ಕುಕ್ಕೆ ದೇವಾಲಯಕ್ಕೆ ಆಗಮಿಸಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಕುಕ್ಕೆ ದೇವಾಲಯಗಳಿಗೆ ಕೊರೊನಾ ನಿಮಿತ್ತ ಸಂಕಷ್ಟದಲ್ಲಿರುವ ಜಗಕ್ಕೆ ಆದಷ್ಟು ಶೀಘ್ರವಾಗಿ ಕಂಟಕ ನಿವಾರಣೆ ಆಗಲಿ, ರಾಜ್ಯದ ದೇಶದ ಜನತೆಗೆ ಮತ್ತು ಪ್ರಪಂಚದ ನಾನಾ ಭಾಗಗಳಲ್ಲಿ ಉದ್ಯೋಗ ನಿಮಿತ್ತ ನಮ್ಮ ನಾಡಿನಿಂದ ತೆರಳಿರುವವರ ಸಂಕಷ್ಟ ನಿವಾರಣೆ ಆಗಲಿ ಎಂಬ ಉದ್ದೇಶದಿಂದ ಕುಟುಂಬ ಸಮೇತರಾಗಿ ಪ್ರಾರ್ಥಿಸಲು ಬಂದಿದ್ದರು.ಆಕರ್ಷಕ ವ್ಯಕ್ತಿತ್ವದ ಖಂಡ್ರೆಯವರು ಕಡಬ ಯುವಕ ಕಾಂಗ್ರೆಸ್ ನ ಅಧ್ಯಕ್ಷರು ಪಧಾಧೀಕಾರಿಗಳಿಗೆ ಶುಭ ಹಾರೈಸಿದರು.ಈಶ್ವರ್ ಖಂಡ್ರೆಯವರ ಜತೆ ಖಂಡ್ರೆ ಬಳಗದಲ್ಲಿ ಗುರುತಿಸಿಕೊಂಡಿರುವ, ಹಾಸನ ನಗರ ಕಾಂಗ್ರೆಸಿನ ಉಸ್ತುವಾರಿ ಅನ್ಸಾಫ್ ಬನ್ಸಾಲೆ ಇದ್ದರು.ಈ ಸಂಧರ್ಭದಲ್ಲಿ, ಮರ್ದಾಳ ಜಂಕ್ಷನ್ ಬಳಿ ಕಡಬ ಯುವಕ ಕಾಂಗ್ರೆಸ್ ವತಿಯಿಂದ ಸ್ವಾಗತಿಸಿ, ಅಭಿನಂದಿಸಲಾಯಿತು. ಕಡಬ ಯುವ ಕಾಂಗ್ರೆಸ್ ಅಧ್ಯಕ್ಷರಾದ ಫೈಝಲ್, ಭಾಷಾ, ಪಂಚಾಯತ್ ಸದಸ್ಯ ಹನೀಫ್ ಹಾಜಿ, ಯೂತ್ ಕಾಂಗ್ರೆಸ್ ಸದಸ್ಯರುಗಳಾದ, ಸಮೀರ್ ಕಡಬ, ಜಬ್ಬಾರ್ ಕಡಬ, ದಾವೂದ್ ಕಡಬ ಜೌಫರ್ ಹೊಸ್ಮಟ ರಿಯಾಸ್ ಕಡಬ, ಬಾಚಾ ಮತ್ತಿತರರು ಜೊತೆಗಿದ್ದರು.

Also Read  ಬೆಂಕಿ ಆಕಸ್ಮಿಕ- ಇಲೆಕ್ಟ್ರಾನಿಕ್ ಅಂಗಡಿ ಸುಟ್ಟು ಕರಕಲು

 

error: Content is protected !!
Scroll to Top