ಗಲ್ಫ್ ನಿಂದ ಹಿಂತಿರುಗಿ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ ಸಾವು

(ನ್ಯೂಸ್ ಕಡಬ) newskadaba.com ಕಾಸರಗೋಡು,ಜೂ.16:  ಕೊರೊನಾ ನಿಗಾದಲ್ಲಿದ್ದ ಗಲ್ಫ್ ಉದ್ಯೋಗಿ ಮೃತಪಟ್ಟ ಘಟನೆ ಕಾಸರಗೋಡಿನ ಉದುಮದಲ್ಲಿ ನಡೆದಿದೆ. ಮೃತಪಟ್ಟವರನ್ನು ಉದುಮ ಸೌತ್ ಕರಿಪ್ಪೊಡಿಯ ಅಬ್ದುಲ್ ರಹಮಾ ನ್ (54) ಎಂದು ಗುರುತಿಸಲಾಗಿದೆ.

ಶನಿವಾರ ಬೆಳಿಗ್ಗೆ ಅಬ್ದುಲ್ ರಹಮಾನ್ ಮತ್ತು ಪುತ್ರ ಜಿಶಾದ್ ಗಲ್ಫ್ ನಿಂದ ಊರಿಗೆ ಬಂದಿದ್ದು , ಮನೆಯಲ್ಲಿ ಕ್ವಾರಂಟೈನ್ ನಲ್ಲಿದ್ದರು . ಸೋಮವಾರ ಬೆಳಿಗ್ಗೆ ಉದುಮ ಪ್ರಾಥಮಿಕ ಆರೋಗ್ಯ ಕೇದ್ರದ ವೈದ್ಯರು ಅಬ್ದುಲ್ ರಹಮಾನ್ ಹಾಗೂ ಜಿಶಾದ್ ನ ಗಂಟಲ ದ್ರವ ತೆಗೆದಿದ್ದು , ತಪಾಸಣೆಗೆ ಕಳುಹಿಸಲಾಗಿದೆ. ವೈದ್ಯಕೀಯ ಪರೀಕ್ಷಾ ವರದಿ ಇಂದು ಲಭಿಸಲಿದೆ. ಸೋಮವಾರ ಸಂಜೆ ಉಸಿರಾಟ ತೊಂದರೆ ಕಂಡು ಬಂದುದರಿಂದ ಅಬ್ದುಲ್ ರಹಮಾನ್ ರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು .ಆದರೆ ಚಿಕಿತ್ಸೆಗೆ ಸ್ಪಂದಿಸದೆ ತಡರಾತ್ರಿ ಮೃತಪಟ್ಟಿದ್ದಾರೆ.

Also Read  ಅ.26ಕ್ಕೆ ಬೆಂಗಳೂರಿನಲ್ಲಿ ಕಂಬಳ ಆಯೋಜನೆ ಇಲ್ಲ: ಪೇಟಾ

 

 

 

error: Content is protected !!
Scroll to Top