ಪೇರಡ್ಕ ರಾಜ್ಯ ಹೆದ್ದಾರಿಯ ಸೇತುವೆ ದುರಸ್ತಿ

ಕಲ್ಲುಗುಡ್ಡೆ, ಜೂ.16: ಸುಬ್ರಹ್ಮಣ್ಯ-ಮರ್ಧಾಳ-ಧರ್ಮಸ್ಥಳ ರಾಜ್ಯ ಹೆದ್ದಾರಿಯ ರೆಂಜಿಲಾಡಿ ಗ್ರಾಮದ ಪೇರಡ್ಕ ಸೇತುವೆಯಲ್ಲಿ ಉಂಟಾಗಿದ್ದ ಕುಸಿತವನ್ನು ಸೋಮವಾರ ದುರಸ್ತಿ ಪಡಿಸಲಾಯಿತು.

ಪೇರಡ್ಕ ಕಿರು ಸೇತುವೆಯ ತಡೆಗೋಡೆ ಬದಿಯಲ್ಲಿ ಗ್ರಾ.ಪಂ. ನ ನೀರಿನ ಪೈಪನ್ನು ಅಳವಡಿಸಲಾಗಿತ್ತು. ಕೆಲದಿನಗಳ ಹಿಂದೆ ಪೈಪು ಹೊಡೆದು ನೀರು ಸೇತುವೆಯ ಬದಿಯ ಕೆಳ ಭಾಗದಲ್ಲಿ ಹರಿದು ಮಣ್ಣು ಕೊಚ್ಚಿ ಹೋಗಿ ರಂದ್ರ ಉಂಟಾಗಿ ಕುಸಿತದ ಭೀತಿ ಉಂಟಾಗಿತ್ತು. ಮಾಹಿತಿ ಅರಿತ ಕೂಡಲೇ ಪುತ್ತೂರು ಲೋಕೋಪಯೋಗಿ ಇಲಾಖೆ ವತಿಯಿಂದ ಸೋಮವಾರ ಕುಸಿತದ ಜಾಗಕ್ಕೆ ಚರಲ್ ಮಣ್ಣು ಹಾಕಿ ದುರಸ್ತಿ ಮಾಡಲಾಯಿತು. ಪುತ್ತೂರು ಪಿಡಬ್ಲ್ಯೂಡಿ ಇಂಜಿನೀಯರ್ ಪ್ರಮೋದ್ ಅವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಬಿಜೆಪಿಯು ಜನರನ್ನು ವಂಚಿಸಿ ಅಧಿಕಾರ ಹಿಡಿಯುತ್ತಿದೆ: ರಾಹುಲ್ ಗಾಂಧಿ ► ಮಂದಿರ, ಮಸೀದಿ, ಚರ್ಚುಗಳಿಗೆ ಭೇಟಿ ನೀಡಿದ ಎಐಸಿಸಿ ಅಧ್ಯಕ್ಷ

error: Content is protected !!
Scroll to Top