ಕುವೈಟ್ ನಲ್ಲಿ ಅಗ್ನಿ ಅವಘಡ ➤ ಕರಾವಳಿಯ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು,ಜೂ.16: ಕರಾವಳಿಯ ಯುವಕನೋರ್ವ ಅಗ್ನಿ ಅವಘಡದಲ್ಲಿ ಮೃತ ಪಟ್ಟ ಘಟನೆ ನಡೆದಿದೆ. ಪಡೀಲ್ ಕೊಡಕ್ಕಲ್ ನಿವಾಸಿಯಾಗಿರವ ಸತೀಶ್ ಕೋಚು ಶೆಟ್ಟಿ ಎಂಬುವವರು, ಕುವೈಟ್ ನಲ್ಲಿ ಆಯಿಲ್ ಗ್ಯಾಸ್ ನಲ್ಲಿ ಉಂಟಾದ ಅವಘಡದಲ್ಲಿ ಮೃತ  ಪಟ್ಟ ಬಗ್ಗೆ ವರದಿಯಾಗಿದೆ.

 

ಕುವೈಟ್ ಆಯಿಲ್, ಗ್ಯಾಸ್ ಕಂಪೆನಿಯೊಂದರಲ್ಲಿ ಕರಾವಳಿಯ ಯುವಕ ಸತೀಶ್ ಉದ್ಯೋಗಿಯಾಗಿದ್ದರು.  ರಾತ್ರಿ ಪಾಳಿಯಲ್ಲಿ ಅವರು ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ವಿಷಕಾರಿ ಅನಿಲ ಬಿಡುಗಡೆಗೊಂಡು ಅಗ್ನಿ ಅವಘಡ ಸಂಭವಿಸಿದೆ. ಈ ವೇಳೆ ಸತೀಶ್ ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬ ಸದಸ್ಯರು  ತಿಳಿಸಿದ್ದಾರೆ.

Also Read  ಅಪ್ರಾಪ್ತೆ ಮೇಲೆ ಆಸಿಡ್ ಎರಚಿ ಪರಾರಿ      ➤ ಯುವಕನೋರ್ವ ಅರೆಸ್ಟ್…!!!

 

 

error: Content is protected !!
Scroll to Top