ಮೃತ ಮೀನುಗಾರ ಭಾಗ್ಯರಾಜ್ ಮನೆಗೆ ಸಚಿವ ಕೋಟ ಭೇಟಿ ➤ ಸಂಕಷ್ಟ ಪರಿಹಾರ ನಿಧಿಯಿಂದ ರೂ 2 ಲಕ್ಷ ವಿತರಣೆ

(ನ್ಯೂಸ್ ಕಡಬ) newskadaba.com ಉಡುಪಿ,ಜೂ.14: ಇತ್ತೀಚೆಗೆ ಮೃತಪಟ್ಟ ಮಲ್ಪೆ ಬಡಾನಿಡಿಯೂರು ಗ್ರಾಮದ ಮೀನುಗಾರರಾದ ಭಾಗ್ಯರಾಜ್ ರವರ ಮನೆಗೆ ಮೀನುಗಾರಿಕೆ ಮತ್ತು ಬಂದರು ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಯವರು ಭೇಟಿ ನೀಡಿ ಮೀನುಗಾರರ ಸಂಕಷ್ಟ ನಿಧಿಯಿಂದ 2 ಲಕ್ಷ ಮೊತ್ತದ ಚೆಕ್ ವಿತರಿಸಿ ಮೃತರ ಪೋಷಕರಿಗೆ ಸಾಂತ್ವನ ಹೇಳಿದರು.


ಈ ಸಂದರ್ಭದಲ್ಲಿ ಶಾಸಕರಾದ ಕೆ ರಘುಪತಿ ಭಟ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ, ಬಡಾನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉಮೇಶ್ ಪೂಜಾರಿ, ತಾಲೂಕು ಪಂಚಾಯತ್ ಸದಸ್ಯರಾದ ಶರತ್ ಬೈಲಕೆರೆ, ಪ್ರಮುಖರಾದ ಮಂಜು ಕೊಳ, ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Also Read  ಪಂಪ್ ರಿಪೇರಿ ವೇಳೆ ಹೈಟೆನ್ಷನ್‌ ಲೈನ್‌ ಗೆ ತಗುಲಿದ ಪೈಪ್ ➤ ಇಬ್ಬರು ಮೃತ್ಯು

error: Content is protected !!
Scroll to Top