ಉಡುಪಿ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ ➤ ಮೇ ತಿಂಗಳಲ್ಲಿ 24 ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಉಡುಪಿ,ಜೂ.14: ಉಡುಪಿ ಜಿಲ್ಲೆಯಲ್ಲಿ ಕೋವಿಡ್‌-19 ವೈರಸ್‌ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಅದರ ನಡುವೆ ಸದ್ದಿಲ್ಲದೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.


ಉಡುಪಿ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣ ನಿಯಂತ್ರಣದಲ್ಲಿದೆ. ಆದರೂ ಕಳೆದ ಎರಡು ವರ್ಷಗಳಿಗೆ ಹೋಲಿಕೆ ಮಾಡಿದರೆ ಪ್ರಕರಣಗಳ ಸಂಖ್ಯೆ ಕೊಂಚ ಏರಿಕೆಯಾಗಿದೆ. 2020 ಜನವರಿ ತಿಂಗಳಿನಿಂದ ಮೇ ವರೆಗೆ ಒಟ್ಟು 72 ಡೆಂಗ್ಯೂ ಪ್ರಕರಣ ಪತ್ತೆಯಾಗಿವೆ. ಇದೇ ಸಮಯಕ್ಕೆ 2018ರಲ್ಲಿ 41 ಪ್ರಕರಣ ಕಂಡುಬಂದಿದ್ದವು. ಈ ಬಾರಿ ಜನವರಿಯಿಂದ ಮೇ ಅಂತ್ಯಕ್ಕೆ 53 ಪ್ರಕರಣಗಳು ಕಂಡುಬಂದಿವೆ. ಪ್ರಸಕ್ತ ಸಾಲಿನಲ್ಲಿ 1,058 ಮಂದಿಯ ರಕ್ತದ ಮಾದರಿ ಸಂಗ್ರಹಿಸಿದ್ದು, ಅವರಲ್ಲಿ 72 ಜನರಿಗೆ ಡೆಂಗ್ಯೂ ಪತ್ತೆಯಾಗಿದೆ. ಜನವರಿ ಮತ್ತು ಮೇ ತಿಂಗಳಲ್ಲಿ ಕ್ರಮವಾಗಿ 23, 24 ಪ್ರಕರಣಗಳು ಪತ್ತೆಯಾಗಿವೆ.

Also Read  ಸರಕಾರಿ ಆಸ್ಪತ್ರೆಗಳು ಬೆಳೆಯಲು ಆಯುಷ್ಮಾನ್ ಭಾರತ ಮತ್ತು ಜನ ಔಷಧಿ ಯೋಜನೆಗಳು ಪೂರಕವಾಗಿವೆ► ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ

 

 

error: Content is protected !!
Scroll to Top