ಕೊಡಗಿನ ಹೆಮ್ಮೆಯ ನಿವೃತ್ತ ಲೆ. ಜನರಲ್ ಸಿ ಎನ್ ಸೋಮಣ್ಣ ನಿಧನ

(ನ್ಯೂಸ್ ಕಡಬ) newskadaba.com ಮಡಿಕೇರಿ,ಜೂ.12: ನಿವೃತ್ತ ಲೆಫ್ಟಿನೆಂಟ್ ಜನರಲ್ ಸಿ ಎನ್ ಸೋಮಣ್ಣ ಶನಿವಾರ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಗಳಿಂದ ಸೊಮಣ್ಣ ವಿರಾಜ್ಪೇಟೆಯಲ್ಲಿರುವ ಅವರ ನಿವಾಸದಲ್ಲಿ ನಿಧನರಾದರು.


ಪಂಜಾಬ್ನ ಅಮೃತಸರದ ಗೋಲ್ಡನ್ ಟೆಂಪಲ್ನಲ್ಲಿ ಆಶ್ರಯ ಪಡೆದಿದ್ದ ಉಗ್ರರನ್ನು ಮಟ್ಟಹಾಕಲು ಆಪರೇಷನ್ ಬ್ಲೂ ಸ್ಟಾರ್ ನಡೆಸಿದ್ದ ವೇಳೆ 1984-85ರ ಅವಧಿಯಲ್ಲಿ ಸೋಮಣ್ಣ ಸೇನಾ ಸಿಬ್ಬಂದಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಜಿಲ್ಲೆಯ ಅತ್ಯಂತ ಅನುಭವಿ ಸೇನಾಧಿಕಾರಿಗಳಲ್ಲಿ ಒಬ್ಬರಾಗಿದ್ದ ಸೋಮಣ್ಣ ಶೌರ್ಯಕ್ಕೆ ಹೆಸರಾಗಿದ್ದರು.ಮೃತರು ಪತ್ನಿ ರೇಣು ಸೋಮಣ್ಣ, ಪುತ್ರ ಡಾ. ನಿವೇದ್ ನಂಜಪ್ಪ, ಪುತ್ರಿ ಶರಣ್ ಪೆಮ್ಮಯ್ಯ ಸೇರಿದಂತೆ ಕುಟುಂಬ ಸದಸ್ಯರು ಹಾಗೂ ಆಪ್ತರನ್ನು ಅಗಲಿದ್ದಾರೆ. ಸೋಮಣ್ಣ ಅವರ ಅಂತ್ಯ ಸಂಸ್ಕಾರ ಭಾನುವಾರ ಅವರ ಸ್ವಗ್ರಾಮದಲ್ಲಿ ನೆರವೇರಲಿದೆ.

Also Read  ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ➤ ಶಿಕ್ಷಣ ಸಚಿವ ಸುರೇಶ್ ಕುಮಾರ್ ಘೋಷಣೆ

error: Content is protected !!
Scroll to Top