ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ►ವಿಟ್ಲ ಪರಿಸರದಲ್ಲಿ ವನಮಹೋತ್ಸವ ಆಚರಣೆ

(ನ್ಯೂಸ್ ಕಡಬ) newskadaba.com ವಿಟ್ಲ,ಸೆ.03, ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ವಿಟ್ಲ ಘಟಕ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ವಿಟ್ಲದ ಕಡಂಬು ಕಲ್ಕುಡ ಕಲ್ಲುರ್ಟಿ ಕೊಡಮಣಿತ್ತಾಯ ದೈವಸ್ಥಾನದ ವಠಾರದಲ್ಲಿ  ಭಾನುವಾರ ನಡೆಯಿತು.

ಕಾರ್ಯಕ್ರಮಕ್ಕೆ ಗೃಹರಕ್ಷಕ ದಳದ ಜಿಲ್ಲಾ ಕಮಾಡೆಂಟ್ ಮುರಳಿ ಮೋಹನ್ ಚೂಂತಾರು ರವರು ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೃಹರಕ್ಷಕ ದಳದ 14 ಘಟಕಗಳಿವೆ. ಪ್ರತಿ ಘಟಕಗಳಲ್ಲಿ ವನಮಹೋತ್ಸವ ಆಚರಿಸುತ್ತಿದ್ದೇವೆ. ಜಿಲ್ಲೆಯಲ್ಲಿ ಒಂದು ಸಾವಿರ ಸಿಬ್ಬಂದಿಗಳಿದ್ದು, ಒಬ್ಬ ಗೃಹರಕ್ಷಕ ದಳದ ಸಿಬ್ಬಂದಿಗೆ ಒಂದು ಗಿಡದಂತೆ ಒಂದು ಸಾವಿರ ಗಿಡಗಳನ್ನು ನೆಡುವ ಕಾರ್ಯಕ್ರಮ ನಾವು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ವಿಟ್ಲ ಪಡ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರವೀಶ್ ಶೆಟ್ಟಿ ಕರ್ಕಳ ಮಾತನಾಡಿ ಗಿಡಗಳನ್ನು ನೆಡುವ ಮೂಲಕ ಪರಿಸರವನ್ನು ಸಂರಕ್ಷಣೆ ಮಾಡುವ ಕಾರ್ಯ ಮಹತ್ವದಾಗಿದೆ. ಇಲ್ಲಿ ನೆಡಲಾದ ಗಿಡಗಳನ್ನು ಗ್ರಾಮ ಪಂಚಾಯಿತಿ ಹಾಗೂ ದೈವಸ್ಥಾನದ ಆಡಳಿತ ಸಮಿತಿಯಿಂದ ಸಂರಕ್ಷಣೆ ಮಾಡುತ್ತದೆ ಎಂದು ತಿಳಿಸಿದರು.

Also Read  ಕೊಯಿಲ ಗ್ರಾ.ಪಂ. ಉಪಚುನಾವಣೆ ► 65.03% ಶಾಂತಿಯುತ ಮತದಾನ

ಕಡಂಬು ಕಲ್ಕುಡ ಕಲ್ಲುರ್ಟಿ ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಕೊಳ್ಕೆರೆ ಗೋವಿಂದ ರಾಜ್ ಪ್ರಭು, ಸಮಿತಿಯ ಜಯ ಕೊಟ್ಟಾರಿ, ಲೋಕಪ್ಪ ಗೌಡ ಬನ, ರಮೇಶ್ ಕೊಟ್ಟಾರಿ, ವಿಟ್ಲ ಗೃಹ ರಕ್ಷಕ ದಳದ ಪ್ರಭಾರ ಘಟಕಾಧಿಕಾರಿ ಸಂಜೀವ, ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಶಶಿಧರ, ಅನೂಪ್ ಕುಮಾರ್, ಚಿತ್ರಲೇಖ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.

error: Content is protected !!
Scroll to Top