ಮತ್ತೆ ಕಾರ್ಯಾಚರಣೆಗೆ ಇಳಿದ ಭಜರಂಗದಳ..! ➤ ಟೆಂಪೊ ಅಡ್ಡಹಾಕಿ 4 ಕೋಣಗಳ ರಕ್ಷಣೆ

(ನ್ಯೂಸ್ ಕಡಬ) newskadaba.com ಮಂಗಳೂರು ,ಜೂ.14 : ಇಂದು ನಸುಕಿನ ಜಾವ ಮಂಗಳೂರಿನಲ್ಲಿ ಅಕ್ರಮ ಜಾನುವಾರು ಸಾಗಾಟ ನಡೆಯುತ್ತಿದ್ದುದನ್ನು ಭಜರಂಗದಳದ ಕಾರ್ಯಕರ್ತರು ದಾಳಿ ನಡೆಸಿ ಪತ್ತೆಹಚ್ಚಿದ್ದಾರೆ. ಕಳೆದ ಕೆಲ ಸಮಯದಿಂದ ಸೈಲೆಂಟ್ ಆಗಿದ್ದ ಭಜರಂಗ ದಳ ಇದೀಗ ಮತ್ತೆ ಎಕ್ಟಿವ್ ಆಗಿದೆ.

 

ಕೊಟ್ಟಾರ ಬಳಿ ಮಿನಿ ಟೆಂಪೋ ತಡೆದು 4 ಕೋಣಗಳನ್ನು ರಕ್ಷಣೆ ಮಾಡಿ ಒಬ್ಬ ಆರೋಪಿಯನ್ನು ಹಿಡಿದು ಸಂಘಟನೆಯ ಕಾರ್ಯಕರ್ತರು ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ. ಉರ್ವ ಪೊಲೀಸ್ ಠಾಣೆಗೆ ಸಮೀಪದಲ್ಲೇ ಘಟನೆ ನಡೆದಿದೆ, ಉಡುಪಿ ಯಿಂದ ಮಂಗಳೂರು ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ 4 ಕೋಣಗಳ ರಕ್ಷಣೆ ಮಾಡಲಾಗಿದೆ. ಉರ್ವ ಪೊಲೀಸರು ಸ್ಥಳಕ್ಕೆ ಧಾವಿಸಿ ಕೋಣಗಳು ಹಾಗೂ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಕಾರ್ಯಾಚರಣೆ ಮೂಲಕ ಕೆಲವು ವರ್ಷಗಳಿಂದ ಸೈಲೆಂಟ್ ಇದ್ದ ಸಂಘಟನೆ ಇದೀಗ ಮತ್ತೆ ಚುರುಕಾಗಿ ವಯಲೆಂಟ್ ಆಗಿದೆ. ಹಿಂದಿನಂತೆ ಫೀಲ್ಡ್ ಗಿಳಿದು ಗೋಸಾಗಾಟ ತಡೆಯಲು ಮುಂದಾಗಿದ್ದು ಸರಕಾರ ಮತ್ತು ಪೋಲೀಸ್ ಇಲಾಖೆಗೆ ಸವಾಲಾಗಿದೆ.

Also Read  ಮೈಸೂರು ಚಿರತೆ ದಾಳಿಗೆ ಯುವತಿ ಬಲಿ

 

error: Content is protected !!
Scroll to Top