ಬಿಜೆಪಿ ಗ್ರಾಮ ಸಮಿತಿ ಸಭೆ ►ಎನ್.ಡಿ.ಎ ಸರಕಾರದ ಜನಪರ ಯೋಜನೆಗಳು ಪ್ರತಿ ಮನೆಗೂ ತಿಳಿದಿರಬೇಕು

(ನ್ಯೂಸ್ ಕಡಬ) newskadaba.com ಕಡಬ,ಸೆ.03, 102ನೇ ನೆಕ್ಕಿಲಾಡಿ ಬಿಜೆಪಿ ಗ್ರಾಮ ಸಮಿತಿ ಸಭೆಯು ಗ್ರಾಮ ಸಮಿತಿ ಅಧ್ಯಕ್ಷರಾದ ಮಂಜುನಾಥ ಕೋಲಂತ್ತಾಡಿಯವರ ಮನೆಯಲ್ಲಿ ಆದಿತ್ಯವಾರ ನಡೆಯಿತು.


ಗ್ರಾ.ಪಂ. ಮಾಜಿ ಅಧ್ಯಕ್ಷ ಜನಾರ್ದನ ಗೌಡ ಪುತ್ತಿಲ ಸಭೆಯನ್ನು ಉದ್ಘಾಟಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಮಾತನಾಡಿ, ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರ ಜನಪರ ಯೋಜನೆಗಳನ್ನು ಹಾಗೂ ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೆ ತಂದ ಯೋಜನೆಗಳನ್ನು ಗ್ರಾಮದ ಪ್ರತಿ ಮನೆ ಮನೆಗೆ ತಿಳಿಸುವ ಮೂಲಕ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 150+ ಕ್ಷೇತ್ರಗಳಲ್ಲಿ ಗೆದ್ದು ಪಕ್ಷ ಅಧಿಕಾರಕ್ಕೆ ಬರುವಂತಾಗಬೇಕೆಂದು ಹೇಳಿದರು.

Also Read  ರಾಮಕುಂಜ: ಸದೃಢ ರಾಷ್ಟ್ರ ನಿರ್ಮಾಣ ವಿದ್ಯಾಸಂಸ್ಥೆಗಳ ಗುರಿಯಾಗಬೇಕು: ವಿಶ್ವಪ್ರಸನ್ನ ಶ್ರೀ

ಕಡಬ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್, ಎಪಿಎಂಸಿ ನಿರ್ದೇಶಕ ಮೇದಪ್ಪ ಗೌಡ ಡೆಪ್ಪುಣಿ, ಗ್ರಾಮ ಉಸ್ತುವಾರಿ ಉಮೇಶ್ ಶೆಟ್ಟಿ ಸಾಯಿರಾಮ್, ಸಿ.ಎ.ಬ್ಯಾಂಕ್ ನಿರ್ದೇಶಕಿ ಲೀಲಾವತಿ ಅಮ್ಮು ಶೆಟ್ಟಿ, ಗ್ರಾ.ಪಂ.ಸದಸ್ಯ ದಾಮೋದರ ಡೆಪ್ಪುಣಿ, ಪ್ರಮುಖರಾದ ಹರೀಶ್ ಕೋರಿಯರ್ ಉಪಸ್ಥಿತರಿದ್ದರು. ನ್ಯಾಯವಾದಿ ಪ್ರಶಾಂತ್ ಪಂಜೋಡಿ ಸ್ವಾಗತಿಸಿ, ಮಂಜುನಾಥ ಕೋಲಂತ್ತಾಡಿ ವಂದಿಸಿದರು.

error: Content is protected !!
Scroll to Top