ಕಡಬ-ಪಂಜ ರಾಜ್ಯ ಹೆದ್ದಾರಿ ಸಂಪರ್ಕ ರಸ್ತೆಯ ದುರವಸ್ಥೆ ► ಪ್ರತಿಭಟನೆ ನಡೆಸುವುದಾಗಿ ಸಾರ್ವಜನಿಕರಿಂದ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಕಡಬ,ಸೆ.03, ಕಡಬ-ಪಂಜ ರಾಜ್ಯ ಹೆದ್ದಾರಿಯಿಂದ ಕೋಡಿಂಬಾಳ-ಮಡ್ಯಡ್ಕ-ಕೋರಿಯಾರ್ ಸಂಪರ್ಕ ರಸ್ತೆಯು ನಾದುರಸ್ತಿಯಲ್ಲಿದ್ದು ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ.


ಸುಮಾರು 13 ವರ್ಷಗಳ ಹಿಂದೆ ಪ್ರಧಾನ ಮಂತ್ರಿಗಳ ಗ್ರಾಮ ಸಡಕ್ ಯೋಜನೆಯ ಅನುದಾನದಲ್ಲಿ ರಸ್ತೆ ಡಾಮರೀಕರಣಗೊಂಡಿತ್ತು. ಇದೀಗ ರಸ್ತೆಯ ಡಾಮರು ಎದ್ದುಹೋಗಿ ಹೊಂಡಗಳ ನಿರ್ಮಾಣವಾಗಿದೆ. ಕಳೆದ 10 ವರ್ಷಗಳಿಂದ ರಸ್ತೆ ದುರಸ್ತಿ ಮಾಡದೇ ಇರುವುದರಿಂದ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಸಾಧ್ಯವಾಗಿದೆ. ಮಡ್ಯಡ್ಕ ಹಾಗೂ ಇತರ ಶಾಲೆಗಳಿಗೆ ಮಕ್ಕಳು ಈ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ರಸ್ತೆ ಮದ್ಯದಲ್ಲಿರುವ ಹೊಂಡ ಗುಂಡಿಗಳಲ್ಲಿ ನಿಂತಿರುವ ಕೆಸರು ನೀರು ಎರಚಿ ಕೆಸರು ಬಟ್ಟೆಯಲ್ಲಿಯೇ ಶಾಲೆಗೆ ಹೋಗಬೇಕಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಗಮನ ಹರಿಸದೇ ಈ ಭಾಗದಲ್ಲಿ ಗ್ರಾಮೀಣ ಜನರ ಉಪಯೋಗಕ್ಕೆ ಇರುವ ರಸ್ತೆಯ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಕೂಡಲೆ ಈ ರಸ್ತೆಯನ್ನು ಕೂಡಲೆ ದುರಸ್ಥಿಗೊಳಿಸಿ ಯೋಗ್ಯ ರಸ್ತೆಯನ್ನಾಗಿ ಮಾಡಿ ಕೊಡದಿದ್ದಲ್ಲಿ ಕಡಬ ಪಂಜ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟಿಸಲಾಗುವುದಾಗಿ ಸಾರ್ವಜನಿಕರು ಎಚ್ಚರಿಸಿದ್ದಾರೆ.

Also Read  ಸೂರ್ಯಗ್ರಹಣ ಪ್ರಯುಕ್ತ ಜೂನ್ 21ರಂದು ಧರ್ಮಸ್ಥಳ ದೇವರ ದರ್ಶನದಲ್ಲಿ ಬದಲಾವಣೆ

ಕಳೆದ ಹಲವಾರು ವರ್ಷಗಳಿಂದ ಮರುಡಾಮರೀಕರಣಗೊಳ್ಳದೆ ಹೊಂಡ ಗುಂಡಿಗಳಿಂದ ಕೂಡಿದ ಕೋಡಿಂಬಾಳ-ಮಡ್ಯಡ್ಕ-ಕೋರಿಯಾರ್ ರೈಲ್ವೆ ಗೇಟ್ ಸಡಕ್ ರಸ್ತೆಯನ್ನು ಕೂಡಲೇ ದುರಸ್ಥಿಗೊಳಿಸದಿದ್ದಲ್ಲಿ ಈ ಭಾಗದ ಎಲ್ಲಾ ಗ್ರಾಮಸ್ಥರನ್ನು ಒಗ್ಗೂಡಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ದ.ಸ.ಸಂ.ಸಮಿತಿ ಕೋಡಿಂಬಾಳ ಶಾಖೆಯ ಸಂಚಾಲಕರಾದ ಉಮೇಶ್ ಮಡ್ಯಡ್ಕ ತಿಳಿಸಿದ್ದಾರೆ.

error: Content is protected !!
Scroll to Top