ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಭೆ ➤ ಗುಳಿಕ್ಕಾನ ಸಂತ್ರಸ್ತರ ಪ್ರದೇಶಕ್ಕೆ ಭೇಟಿಗೆ ನಿರ್ಧಾರ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ,ಜೂ.12: ಮಲೆನಾಡು ಜನಹಿತ ರಕ್ಷಣಾ ವೇದಿಕೆ ಮಾಸಿಕ ಮಹಾಸಭೆ ಗುರುವಾರ ಸುಬ್ರಹ್ಮಣ್ಯ – ಐನೆಕಿದು ಪ್ರಾಥಮಿಕ ಕೃಷಿ ಸಹಕಾರ ಸಂಘದ ಸಭಾಂಗಣದಲ್ಲಿ ಜರಗಿತು. ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದ ಕಲ್ಮಕ್ಕಾರು ಗ್ರಾಮ ಗುಳಿಕ್ಕಾನದ 9 ಕುಟುಂಬಗಳಿಗೆ ಸರಕಾರ ಬಿಡುಗಡೆಗೊಳಿಸಿದ ಪರಿಹಾರ ಮೊತ್ತ ವಿನಿಯೋಗ ಮತ್ತು ನಿವೇಶನ ಮಂಜೂರಾತಿ ಸಮಸ್ಯೆ ಪರಿಹಾರಕ್ಕಾಗಿ ವೇದಿಕೆ ನಿಯೋಗ ಶೀಘ್ರ ಸ್ಥಳ ಪರಿಶೀಲನೆಗೆ ತೆರಳಲು ಸಭೆಯಲ್ಲಿ ನಿರ್ಧರಿಸಲಾಯಿತು.

 

Also Read  ಬೈಕ್‌ ಸವಾರನ ತಲೆಮೇಲೆ ಹರಿದ ಶಾಸಕನ ಕಾರು ➤ ಸವಾರ ಸ್ಥಳದಲ್ಲೇ ಮೃತ್ಯು !

ವೇದಿಕೆಯ ಸಹಕಾರ ಸಮಿತಿಗೆ ಹಿರಿಯ ಸಹಕಾರ ಧುರೀಣ ಪ್ರಸನ್ನ ಎಣ್ಮೂರು ಅವರನ್ನ ಆಯ್ಕೆಮಾಡಲಾಯಿತು. ಸಾಲಮನ್ನಾ, ಬೆಳೆವಿಮೆ ಮತ್ತು ಸಾಲಕಂತು ಅವದಿ ವಿಸ್ತರಣೆ ಬಗ್ಗೆ ಸರಕಾರದ ಗೊಂದಲದಿಂದಾಗಿ ರೈತರಲ್ಲಿನ ಆತಂಕದ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ವೇದಿಕೆ ಪ್ರಮುಖರಾದ ಜಯಪ್ರಕಾಶ್ ಕೂಜುಗೋಡು, ರವೀಂದ್ರಕುಮಾರ್ ರುದ್ರ ಪಾದ, ಭರತ್ ಕನ್ನಡ್ಕ, ಟಿ.ಎನ್.ಸತೀಶ್ ಕೊಲ್ಲಮೊಗ್ರು, ಶೇಖರಪ್ಪ ಬೆಂಡೋಡಿ, ಭಾನುಪ್ರಕಾಶ್ ಪೆರುಮುಂಡ, ವೆಂಕಟೇಶ್ ಎಚ್.ಎಲ್. ಪಾಲ್ಗೊಂಡಿದ್ದರು.

 

 

error: Content is protected !!
Scroll to Top