ಮಕ್ಕಳ ವಿರುದ್ದ ದೂರು ➤ ಕೆರೆಗೆ ಹಾರಿ ವೃದ್ದ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com  ಪುತ್ತೂರು,ಜೂ.12:  ಮಕ್ಕಳ ಮೇಲೆ ದೂರು ನೀಡಿದ ತಂದೆ ಕೊನೆಗೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ 11ರ ಗುರುವಾರ ಶಾಂತಿಗೋಡು ಗ್ರಾಮದ ನೆಕ್ಕರೆಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಶಾಂತಿಗೋಡು ಗ್ರಾಮದ ನೆಕ್ಕರೆ ಸೇಸಪ್ಪ ಕುಲಾಲ್ (74) ಎನ್ನಲಾಗಿದೆ.

20 ದಿನಗಳ ಹಿಂದೆ ಸೇಸಪ್ಪ ಕುಲಾಲ್ ಅವರು ತನ್ನ ಇಬ್ಬರು ಮಕ್ಕಳ ವಿರುದ್ದ ಪೊಲೀಸರಿಗೆ ದೂರು ನೀಡಿದ್ದರು. ಈ ವಿಚಾರದ ಬಗ್ಗೆ ವಿಚಾರಣೆ ನಡೆಸಿದ ಬಳಿಕ ಮನೆಯಲ್ಲಿ ಯಾರೊಂದಿಗೆ ಮಾತನಾಡುತ್ತಿರಲಿಲ್ಲ ಎನ್ನಲಾಗಿದೆ. ಕೆಲಸಕ್ಕೂ ತೆರಳದೇ ಮನೆಯಲ್ಲೇ ಇರುತ್ತಿದ್ದರು ಎನ್ನಲಾಗಿದೆ.ನ ಜೂನ್ 10 ಬುಧವಾರದಂದು ರಾತ್ರಿ ಊಟ ಮಾಡಿ ಮಲಗಿದ್ದ ಅವರು ಬೆಳಗ್ಗೆ ನಾಪತ್ತೆಯಾಗಿದ್ದರು. ಅವರ ಮೊಬೈಲ್ಗೆ ಮನೆಮಂದಿ ಕರೆ ಮಾಡಿದ ಸಂದರ್ಭ ತೋಟದ ಕೆರಯ ಬಳಿ ಮೊಬೈಲ್ ರಿಂಗ್ ಆಗಿದ್ದು, ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಮೃತದೇಹ ಕಂಡುಬಂದಿದೆ. ಮೃತರ ಪತ್ನಿ ಕಮಲಾ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ➤ ಸಿಂದಗಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೃದಯಾಘಾತದಿಂದ ಮೃತ್ಯು..!

 

 

error: Content is protected !!
Scroll to Top