ಮಂಗಳೂರು: ಶ್ರೀ ಮಂಗಳಾದೇವಿ ಕ್ಷೇತ್ರದ ಪ್ರಧಾನ ಅರ್ಚಕ ಬಿ. ವೇಣುಗೋಪಾಲ್ ಐತಾಳ್ ನಿಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.12 : ಶ್ರೀಮಂಗಳಾದೇವಿ ದೇವಸ್ಥಾನದ ಪ್ರಧಾನ ಅರ್ಚಕ ಬಿ. ವೇಣುಗೋಪಾಲ್ ಐತಾಳ್(49) ಅವರು ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಜೂ. 11ರಂದು ನಿಧನರಾಗಿದ್ದಾರೆ.

 

ಶ್ರೀಮಂಗಳಾದೇವಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಹಾಗೂ ಪೂಜಾ ಮನೆತನಕ್ಕೆ ಸೇರಿದ ಇವರು, ಈ ವರ್ಷದ ಪ್ರಧಾನ ಅರ್ಚಕರಾಗಿ ನಿಯುಕ್ತಿಗೊಂಡಿದ್ದರು. ದೇವಸ್ಥಾನದ ಪೂಜಾ ಕೆಲಸದೊಂದಿಗೆ ಊರಿನ ಪೌರೋಹಿತ್ಯವನ್ನು ನಿರ್ವಹಿಸುತ್ತಿದ್ದರು ಇವರು ತಾಯಿ ಜಲಜಾಕ್ಷಿ, ಸಹೋದರ ವೇದಮೂರ್ತಿ ಚಂದ್ರಶೇಖರ್ ಐತಾಳ್, ಹರೀಶ್ ಐತಾಳ್, ಸಹೋದರಿ ಲಕ್ಷ್ಮೀ ಹೊಳ್ಳರವರನ್ನ ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಶುಕ್ರವಾರ  ನಡೆಯಲಿದೆ.

Also Read  ಕಡಬ: ನೇಣುಬಿಗಿದು ಮಹಿಳೆ ಆತ್ಮಹತ್ಯೆ

error: Content is protected !!
Scroll to Top