ನನ್ನ ಮತ್ತು ನನ್ನ ಕುಟುಂಬದವರನ್ನು ಬ್ಲೂ ವೇಲ್’ನವರು ಸಾಯಿಸ್ತಾರಂತೆ ಪ್ಲೀಸ್ ಕಾಪಾಡಿ! ► ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ 12ರ ಬಾಲಕ..!!!

(ನ್ಯೂಸ್ ಕಡಬ) newskadaba.com ಚೆನ್ನೈ,ಸೆ.03, ಇತ್ತೀಚೆಗೆ ಬೆಳಕಿಗೆ ಬಂದ ಕೆಲ ಬ್ಲೂವೇಲ್ ಗೇಮ್ ಪ್ರಕರಣಗಳ ಪೈಕಿ ಕೆಲ ಪೋಷಕರು ಹಾಗೂ ಶಾಲಾ ಶಿಕ್ಷಕರು ಬಹಿರಂಗಪಡಿಸಿದ್ದರು. ಬಹಳಷ್ಟು ವಿದ್ಯಾರ್ಥಿಗಳು ತಾವು ಆಟ ಆಡುತ್ತಿರುವ ವಿಷಯನ್ನು ಬಹಿರಂಗಪಡಿಸದೇ ಗೋಂದಲಕ್ಕೀಡಾದಿದ್ದಾರೆ. ಇದಕ್ಕೂ ಕಾರಣವೂ ಇದೆ ತಾವು ಆಡುತ್ತಿರುವ ಆಟವನ್ನು ಬಹಿರಂಗ ಪಡಿಸಿದರೆ ತಮ್ಮ ಇಡೀ ಕುಟುಂಬ ಸರ್ವನಾಶ ಆಗುತ್ತದೆ ಎನ್ನುವ ಭೀತಿಯಿಂದಾಗಿ ಇದನ್ನು ಮುಚ್ಚಿಡುತ್ತಿದ್ದಾರೆ.

ರಾಜ್ಯದಲ್ಲಿ ಮಕ್ಕಳ ನೆರವಿಗೆಂದೇ ಇರುವ 104 ಸಂಖ್ಯೆಗೆ ಇತ್ತೀಚೆಗೆ ಕರೆ ಮಾಡಿದ್ದ ತಮಿಳುನಾಡಿನ ತಿರುಪೂರ್‌ನ 12 ವರ್ಷದ ಬಾಲಕನೊಬ್ಬ ‘ ಬ್ಲೂವೇಲ್ ನವರು ನನ್ನನ್ನು ಮತ್ತು ನನ್ನ ಕುಟುಂಬದವರನ್ನು ಸಾಯಿಸಿಬಿಡುತ್ತಾರೆ. ದಯವಿಟ್ಟು ಕಾಪಾಡಿ’ ಎಂದು ಮೊರೆ ಇಟ್ಟ ಘಟನೆ ಬೆಳಕಿಗೆ ಬಂದಿದೆ.

ತನಗೆ ಈ ಆಟದಿಂದ ಹೊರಬೇಕೆಂಬ ಆಸೆ ಇದೆ, ಆದರೆ ಆಟ ನಿರ್ವಹಣೆ ಮಾಡುತ್ತಿರುವವರು, ನೀನು ಆಟದಿಂದ ಹೊರಹೋದರೆ ನಿನ್ನನ್ನು ಮತ್ತು ನಿನ್ನ ಕುಟುಂಬ ಸದಸ್ಯರನ್ನು ನಿರ್ನಾಮ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಹಾಗಾಗಿ ನಮ್ಮ ಕುಟುಂಬ ಸದಸ್ಯರನ್ನು ಕಾಪಾಡಿ ಎಂದು ಸಹಾಯವಾಣಿ ತಜ್ಞರ ಬಳಿ ನೋವಿನಿಂದ ಹೇಳಿಕೊಂಡಿದ್ದಾನೆ ಈ 12 ರ ಬಾಲಕ. ಇದೇ ರೀತಿ ಮತ್ತೊಬ್ಬ ಬಾಲಕ ಕೂಡಾ ತನ್ನ ನೋವನ್ನು ಸಹಾಯವಾಣಿ ಬಳಿ ತೋಡಿಕೊಂಡಿದ್ದಾನೆ ಎನ್ನಲಾಗಿದೆ. ದೇಶದಲ್ಲಿ ಬ್ಲೂವೇಲ್ ಆಟದಿಂದ ಹಲವು ಆತ್ಮಹತ್ಯೆ ಪ್ರಕರಣಗಳು ನಡೆದ ಬೆನ್ನಲ್ಲೇ, ಯುವಕರು ಈ ಆಟದಿಂದ ಹೊರಬರುವ ಮಾರ್ಗವನ್ನು ಹುಡುಕುತ್ತಿದ್ದಾರೆ. ಬಹುತೇಕರು ಒಂದು ವೇಳೆ ತಾವು ಈ ಆಟದಿಂದ ಹೊರಬಂದರೆ ತಮಗೆ ಕೊಲೆ ಬೆದರಿಕೆ ಹಾಕಲಾಗುತ್ತದೆ ಅಥವಾ ತಮ್ಮ ಕುಟುಂಬ ಅಪಾಯಕ್ಕೆ ಸಿಲುಕುತ್ತದೆ ಎಂಬ ಭಯಕ್ಕೆ ಒಳಗಾಗಿದ್ದಾರೆ ಎಂದು ಆತ್ಮಹತ್ಯೆ ತಡೆ ಕೇಂದ್ರ- ’ಸ್ನೇಹಾ’ ಸ್ಥಾಪಕಿ ಡಾ. ಲಕ್ಷ್ಮಿ ವಿಜಯ್ ಹೇಳಿದ್ದಾರೆ.

Also Read  ಸಾಲ್ಮರ :ಸಹೋದರಿ ಮನೆಯಲ್ಲಿದ್ದ ಅವಿವಾಹಿತೆ ನಾಪತ್ತೆ ಪ್ರಕರಣ ➤ ಮಂಗಳೂರಿನಲ್ಲಿ ಅವಿವಾಹಿತೆ ಪತ್ತೆ

ಆಟದ ಆರಂಭದಲ್ಲೇ, ಆಟಗಾರರ ಎಲ್ಲಾ ಮಾಹಿತಿಯನ್ನು ಆಟದ ನಿರ್ವಾಹಕರು ಪಡೆದುಕೊಂಡಿರುತ್ತಾರೆ. ಜೊತೆಗೆ ಗೇಮ್‌ನ 50ನೇ ಚಾಲೆಂಜ್ ಆತ್ಮಹತ್ಯೆಯದ್ದಾಗಿರುತ್ತದೆ ಎಂದೂ ಹೇಳಿರುತ್ತಾರೆ. ಇದಕ್ಕೆ ಒಪ್ಪಿದಲ್ಲಿ ಮಾತ್ರ ಆಟಕ್ಕೆ ಪ್ರವೇಶ. ಮಧ್ಯದಲ್ಲಿ ಹೊರಹೋದರೆ, ನಿಮ್ಮ ಎಲ್ಲಾ ಮಾಹಿತಿ ನಮ್ಮ ಬಳಿ ಇದೆ. ನಿಮ್ಮನ್ನು ಮತ್ತು ನಿಮ್ಮ ಕುಟುಂಬ ಸದಸ್ಯರನ್ನು ನಿರ್ನಾಮ ಮಾಡಿಬಿಡುತ್ತೇವೆ ಎಂದು ನಿರ್ವಾಹಕರು ಎಚ್ಚರಿಕೆ ನೀಡುತ್ತಾರೆ. ಇದರಿಂದ ಹೆದರಿಕೊಳ್ಳುವ ಬಹಳಷ್ಟು ವಿದ್ಯಾರ್ಥಿಗಳು ವಿಷಯವನ್ನು ಮನೆಯಲ್ಲಿ ಬಹಿರಂಗಪಡಿಸುವುದೂ ಇಲ್ಲ ಜೊತೆಗೆ ಆಟದಿಂದ ಹಿಂದೆ ಸರಿಯವುದಿಲ್ಲ.

Also Read  ಕಾಸರಗೋಡು: ಕಣಜದ ಹುಳು ದಾಳಿ ➤ ಕಾರ್ಮಿಕ ಮೃತ್ಯು

 

error: Content is protected !!
Scroll to Top