ಕುಕ್ಕೆ ಸುಬ್ರಮಣ್ಯದಲ್ಲಿ ಎರಡನೇ ದಿನ 2 ಸಾವಿರಕ್ಕೂ ಅಧಿಕ ಭಕ್ತರು

(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ರಹ್ಮಣ್ಯ ,ಜೂ.10: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಂಗಳವಾರ 2.194 ಮಂದಿ ದೇವರ ದರ್ಶನ ಮಾಡಿದ್ದಾರೆ. ಮಂಗಳವಾರವೂ ಕೊಲ್ಲೂರಿನ ಶ್ರೀ ಮೂಕಾಂಬಿಕಾ  ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ವಿರಳವಾಗಿತ್ತು ಮೊದಲ ದಿನ ಸೋಮವಾರ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳಗಳಲ್ಲಿ ಭಕ್ತ ಸಮೂಹ ಹೆಚ್ಚಾಗಿತ್ತು.

ಆದರೆ ಮಂಗಳವಾರ ಈ ಪ್ರಮಾಣ ಸ್ವಲ್ಪ ಕಡಿಮೆಯಾಗಿತ್ತು.ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳಗಳಲ್ಲಿ ಎರಡನೇ ದಿನ ಆಗಮಿಸಿದ ಭಕ್ತರಲ್ಲಿ ಉತ್ಸಾಹಕ್ಕೆ ಕೊರತೆ ಇರಲಿಲ್ಲ. ಭಕ್ತರಿಗೆ ಥರ್ಮಲ್ ಟೆಸ್ಟ್ ಮಾಡಿಸಿಯೇ ಒಳಗೆ ಬಿಡಲಾಗುತ್ತಿತ್ತು. ಕೊರೋನಾ ಮಹಾಮಾರಿಯನ್ನು ದೇವರೆ ತೊಲಗಿಸಬೇಕಷ್ಟೆಎಂದು ಪ್ರತ್ಯೇಕವಾಗಿ ಪ್ರಾರ್ಥಿಸುತ್ತಿದ್ದರು.ಎಂದು ದೇವಾಲಯದ ಮೂಲಗಳು ತಿಳಿಸಿವೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಂಗಳವಾರ 2,194 ಮಂದಿ ದೇವರ ದರ್ಶನ ಮಾಡಿದ್ದಾರೆ. 77 ದಿನಗಳ ಬಳಿಕ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗಿದ್ದರೂ,.ಮಂಗಳವಾರ ದರ್ಶನ ಪಡೆದವರಲ್ಲಿ ಹೊರ ರಾಜ್ಯಗಳಿಂದ ಬಂದಿದ್ದ ಭಕ್ತರು ಕಾಣಿಸಲಿಲ್ಲ.

Also Read  ಚಾಕೊಲೇಟ್ ಎಂದು ಇಲಿ ಪಾಷಾಣ ತಿಂದು ಮಗು ಮೃತ್ಯು..!

error: Content is protected !!