ಆರ್ಥಿಕ ಸಂಕಷ್ಟವೇ ಮುಳುವಾಯ್ತು ➤ ಬೋಟ್ ನಲ್ಲಿ ನೇಣು ಹಾಕಿಕೊಂಡ ಯುವಕ

(ನ್ಯೂಸ್ ಕಡಬ) newskadaba.com ಉಡುಪಿ ,ಜೂ.10:  ಕೊರೊನಾ ಮಹಾಮಾರಿ ವಕ್ಕರಿಸಿ, ಲಾಕ್ ಡೌನ್ ಆದಾಗ ಇಡೀ ದೇಶವೇ ಸ್ತಬ್ಧವಾಗಿತ್ತು. ಅಲ್ಲದೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ದೇಶ ಬಡವಾಗಿದೆ. ಹಲವು ಕಂಪೆನಿಗಳು ಆರ್ಥಿಕ ಹೊಡೆತಕ್ಕೆ ತತ್ತರಿಸಿ ಶಾಶ್ವತವಾಗಿ ಬೀಗ ಜಡಿದವು. ಹಲವರು ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದರು. ಇನ್ನೂ ಕೆಲವು ಕಂಪೆನಿಗಳು ಅರ್ಧ ಸಂಬಳ ನೀಡಿ ದುಡಿಸಿಕೊಳ್ಳುತ್ತಿದ್ದಾರೆ. ಇಂತಹ ಕಠಿಣ ಸಮಯದಲ್ಲಿ ಕಂಗಾಲಾದ ಹಲವು ಯುವಜನತೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.

ಹೌದು.. ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಇದೀಗ ಪ್ರತಿಭಾವಂತ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ತೊಟ್ಟಂ ಸಮೀಪದ ಪೌಂಜಿ ಗುಡ್ಡೆ ನಿವಾಸಿಯಾದ ಭಾಗ್ಯರಾಜ್ ಎಂಬವರೇ ಮೃತ ದುರ್ದೈವಿ. ಆರ್ಥಿಕ ಸಂಕಷ್ಟದಿಂದಾಗಿ ಮಲ್ಪೆ‌ ಬಂದರಿನಲ್ಲಿ ಬೋಟ್ ನಲ್ಲೇ‌ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾಗ್ಯರಾಜ್ ಸಾಲ ಮಾಡಿ ಮನೆ ಮತ್ತು ಮೀನುಗಾರಿಕಾ ಬೋಟ್ ಖರೀದಿಸಿದ್ದರು.ಆದರೆ ಲಾಕ್ ಡೌನ್ ನಿಂದಾಗಿ ವ್ಯವಹಾರದಲ್ಲಿ ತೀರ ನಷ್ಟ ಉಂಟಾದ ಹಿನ್ನೆಲೆ, ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಲ್ಪೆ ಬಂದರಿನಲ್ಲಿ ಲಂಗರು ಹಾಕಿರುವ ಬೋಟಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾಗ್ಯರಾಜ್ ಒಬ್ಬ ಉತ್ತಮ ಕಬಡ್ಡಿ ಪಟುವಾಗಿದ್ದರು. ಸದ್ಯ ಸ್ಥಳಕ್ಕೆ ಮಲ್ಪೆ ಠಾಣಾ ಪೊಲೀಸರ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

Also Read  ಯಶೋದಾ ಜನರಲ್ ಸ್ಟೋರ್ ನಲ್ಲಿ ವಿಶೇಷ ದರಕಡಿತ ಮಾರಾಟ ➤ 107 ಮಂದಿ ಅದೃಷ್ಟಶಾಲಿಗಳಿಗೆ ಬಹುಮಾನ ಗೆಲ್ಲುವ ಅವಕಾಶ

 

error: Content is protected !!
Scroll to Top