ಈಶ್ವರಮಂಗಲ ➤ 25 ಅಡಿ ಆಳಕ್ಕೆ ಉರುಳಿ ಮನೆಯ ಮೇಲೆ ಪಲ್ಟಿಯಾದ KSRTC ಬಸ್

(ನ್ಯೂಸ್ ಕಡಬ) newskadaba.com ಪುತ್ತೂರು,ಜೂ.10: ಪುತ್ತೂರಿನಿಂದ ಈಶ್ವರಮಂಗಲ ಕಡೆ ಸಂಚರಿಸುತ್ತಿದ್ದ  KSRTC ಬಸ್ ಈಶ್ವರಮಂಗಲ ಸಮೀಪದ ಸಾಂತ್ಯ ಎಂಬಲ್ಲಿ ಪಲ್ಟಿಯಾಗಿ ಮನೆಯೊಂದರ ಮೇಲೆ ಬಿದ್ದ ಘಟನೆ ಇಂದು  ಬೆಳಿಗ್ಗೆ ನಡೆದಿದೆ.

 

ಪುತ್ತೂರಿನಿಂದ ಈಶ್ವರಮಂಗಲ ಕಡೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಧರೆಗುರುಳಿ 25 ಅಡಿ ಆಳದಲ್ಲಿರುವ ಮಂಜುನಾಥ ರೈ ಎಂಬವರ ಮನೆಯ ಬದಿಯ  ದನದ ಹಟ್ಟಿಯ ಮೇಲೆ ಪಲ್ಟಿಯಾಗಿದೆ. ಬಸ್ಸಿನಲ್ಲಿ ಸುಮಾರು 21 ಜನ ಪ್ರಯಾಣಿಕರಿದ್ದು ಯಾವುದೇ ಅಪಾಯ ಸಂಭವಿಸಿಲ್ಲ. ಬಸ್ಸಿನ ಚಾಲಕ ಹಾಗೂ ನಿರ್ವಾಹಕನಿಗೆ ಸಣ್ಣ ಪುಟ್ಟ ಗಾಯವಾಗಿದೆ ಎಂದು ತಿಳಿದು ಬಂದಿದೆ. ಘಟನೆಯ ಪರಿಣಾಮ  ದನದ ಹಟ್ಟಿ ಮನೆಯ ಹಂಚುಗಳು ಪುಡಿಯಾಗಿದೆ.

Also Read  ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಬಂಧಿಸಿದ ಬಂಟ್ವಾಳ ಪೊಲೀಸರು !

 

error: Content is protected !!
Scroll to Top