ನಾಪತ್ತೆಯಾಗಿದ್ದ ಯುವ ಜೋಡಿ ಮದುವೆಯಾಗಿ ಪತ್ತೆ ➤ ಜೋಡಿಯನ್ನ ಕರೆ ತಂದ ಸುಬ್ರಹ್ಮಣ್ಯ ಪೊಲೀಸರು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜೂ.10: ಯುವ ಜೋಡಿಯೊಂದು ನಾಪತ್ತೆಯಾದ ಬಗ್ಗೆ ಪ್ರಕರಣ ದಾಖಲಾಗಿ 24 ಗಂಟೆಗಳಲ್ಲಿ ಸುಬ್ರಹ್ಮಣ್ಯ ಪೊಲೀಸರು ಜೋಡಿಯನ್ನು ಪತ್ತೆಹಚ್ವಿ ಕರೆತಂದಿದ್ದಾರೆ.

ಹರಿಹರ ಪಲ್ಲತಡ್ಕ ಗ್ರಾಮದ ಕಲ್ಲೆಮಠದ ಯುವತಿ ಲಿಖಿತಾ ಹಾಗೂ ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಯುವಕ, ಸುಬ್ರಹ್ಮಣ್ಯದಲ್ಲಿ ಹೋಮ್ ಗಾರ್ಡ್ ಆಗಿ ಕರ್ತವ್ಯದಲ್ಲಿದ್ದ ಅಭಿಲಾಷ್ ವಾರದ ಹಿಂದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಸೋಮವಾರದಂದು ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಂಗಳವಾರದಂದು ಪ್ರೇಮಿಗಳನ್ನು ಬೆಂಗಳೂರಿನಲ್ಲಿ ಪತ್ತೆಹಚ್ಚಿರುವ ಸುಬ್ರಹ್ಮಣ್ಯ ಪೊಲೀಸರು, ಬುಧವಾರ ಬೆಳಿಗ್ಗೆ ಕರೆತಂದಿದ್ದಾರೆ. ಯುವಕ ಹಾಗೂ ಯುವತಿ ಮದುವೆಯಾಗಿದ್ದು, ಯುವತಿಯನ್ನು ಯುವಕನ ಜೊತೆ ಕಳುಹಿಸಿಕೊಡಲಾಗಿದೆ.

Also Read  ಕಲುಷಿತ ನೀರಿನ ದುರಂತ ಮತ್ತೆ ಮರುಕಳಿಸಿದರೆ ಸಿಇಒ ಅಮಾನತು ➤ ಸಿಎಂ ಖಡಕ್ ಎಚ್ಚರಿಕೆ

 

error: Content is protected !!
Scroll to Top