ಆಪೆ ರಿಕ್ಷಾಗೆ KSRTC ಬಸ್ ಢಿಕ್ಕಿ ►ಇಬ್ಬರ ದುರ್ಮರಣ

(ನ್ಯೂಸ್ ಕಡಬ) newskadaba.com ರಾಮನಗರ,ಸೆ.03, ತರಕಾರಿ ತೆಗೆದುಕೊಂಡು ಹೋಗುತ್ತಿದ್ದ ಆಪೆ ರಿಕ್ಷಾ ಹಾಗೂ ಕೆಎಸ್‍ಆರ್‍ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಆಪೆ ರಿಕ್ಷಾದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಾಗಡಿ ತಾಲೂಕಿನ ಜ್ಯೋತಿ ಪಾಳ್ಯದ ಆದಿತ್ಯವಾರ ನಡೆದಿದೆ.

ಬೆಂಗಳೂರು-ಮಾಗಡಿ ಹೆದ್ದಾರಿಯಲ್ಲಿ ಬರುವ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಜ್ಯೋತಿ ಪಾಳ್ಯದ ಬಳಿ ಈ ಘಟನೆ ನಡೆದಿದೆ. ಚಿತ್ರದುರ್ಗ ಮೂಲದ ರಘು, ಪರಮೇಶ್ವರ್ ಮೃತ ದುರ್ದೈವಿಗಳು.

ಮೃತರಿಬ್ಬರು ಬೆಂಗಳೂರಿನ ನಾಗರಬಾವಿಯಲ್ಲಿ ವಾಸವಾಗಿದ್ದರು. ಮಾಗಡಿಯಿಂದ ತರಕಾರಿ ಖರೀದಿಸಿ ಅದನ್ನು ಬೆಂಗಳೂರಿನಲ್ಲಿ ಮಾರಾಟ ಮಾಡಿ ಜೀವನ ಸಾಗಿಸುತ್ತ ಇದ್ದರು ಎನ್ನಲಾಗಿದೆ. ಎಂದಿನಂತೆ ಆದಿತ್ಯವಾರ ಬೆಳಿಗ್ಗೆ ಮಾಗಡಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿ ಮಾಡಿ ಬೆಂಗಳೂರಿಗೆ ಹೊರಟಿದ್ದರು. ಆದ್ರೆ ಮಾಗಡಿಯ ಜ್ಯೋತಿ ಪಾಳ್ಯದ ಬಳಿ ಎದುರಿಗೆ ಬಂದ ಕೆಎಸ್ ಆರ್ ಟಿಸಿ ಬಸ್ – ಆಪೆ ರಿಕ್ಷಾಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿಯೇ ರಘು ಹಾಗೂ ಪರಮೇಶ್ ಮೃತಪಟ್ಟಿದ್ದಾರೆ.

Also Read  ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ - ಮೂವರು ಆರೋಪಿಗಳ ಜಾಮೀನು ಅರ್ಜಿ ವಜಾ

ಘಟನೆ ಸಂಬಂಧಿಸಿ ಮಾಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

error: Content is protected !!
Scroll to Top