ಹರಿಹರದ ಯುವತಿ-ಚಾರ್ವಾಕದ ಯುವಕ ನಾಪತ್ತೆ ➤ ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲು

(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ರಹ್ಮಣ್ಯ,ಜೂ.09: ಹರಿಹರ ಪಲ್ಲತಡ್ಕ ಗ್ರಾಮ ಕಲ್ಲೆಮಠದ ಯುವತಿ ಹಾಗೂ ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಕುಂಬ್ಲಾಡಿಯ ಯುವಕ ಇಬ್ಬರೂ ಒಂದೇ ದಿನ ನಾಪತ್ತೆಯಾಗಿರುವ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಹರಿಹರ ಪಲ್ಲತಡ್ಕ ಗ್ರಾಮದ ಕಲ್ಲೆಮಠದ ಯುವತಿ ಹಾಗೂ ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಕುಂಬ್ಲಾಡಿಯ ಯುವಕ ಇಬ್ಬರು ಒಂದೇ ದಿನ ನಾಪತ್ತೆಯಾಗಿದ್ದು, ಇದರ ಕುರಿತಾಗಿ ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಾಗಿದೆ. ಸುಬ್ರಹ್ಮಣ್ಯದ ಕೆ.ಎಸ್.ಆರ್.ಟಿ.ಸಿ ಬಸ್ ತಂಗುದಾಣದಲ್ಲಿ ಹೋಂ ಗಾರ್ಡ್ ಆಗಿದ್ದ ಅಭಿಲಾಷ್ ಹರಿಹರ ಹಾಗೂ ಕಲ್ಲೇಮಠದ ಯುವತಿ ಲಿಖಿತಾ ಅವರ ನಡುವೆ ಪ್ರೇಮಾಂಕುರವಾಗಿತ್ತು. ಜೂ. 3 ರಂದು ಮನೆಯಿಂದ ಕಾಣೆಯಾಗಿದ್ದ ಯುವತಿ ಲಿಖಿತಾ, ತಾನು ಇಷ್ಟ ಪಟ್ಟ ಹುಡುಗನೊಂದಿಗೆ ಹೋಗುವುದಾಗಿ ಪತ್ರ ಬರೆದಿಟ್ಟಿದ್ದಾಳೆ. ಇತ್ತ ಅದೇ ದಿನ ಯುವಕ ಅಭಿಲಾಷ್ ಕೂಡ ಕಾಣೆಯಾಗಿದ್ದಾನೆ. 5 ದಿನಗಳ ಹಿಂದೆ ಯುವಕ ಹಾಗೂ ಯುವತಿ ಒಂದೇ ದಿನ ಕಾಣೆಯಾಗಿದ್ದು, ಮನೆಯವರು ಹುಡುಕಾಡಿದರೂ ಅವರಿಬ್ಬರು ಪತ್ತೆಯಾಗಲಿಲ್ಲ. ಈ ಕುರಿತು, ಇಬ್ಬರ ಪೋಷಕರು ಜೂ. 8 ರಂದು ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಯುವಕ ಹಾಗೂ ಯುವತಿ ಒಂದೇ ದಿನ ಕಾಣೆಯಾಗಿರುವುದರಿಂದ ಇವರಿಬ್ಬರು ಒಟ್ಟಿಗೆ ಹೋಗಿರಬಹುದೆಂದು ಹೇಳಲಾಗುತ್ತಿದೆ. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಹಿರಿಯ ಸಾಹಿತಿ ಡಾ. ಸಾರಾ ಅಬೂಬಕ್ಕರ್ ನಿಧನ..!!

 

 

error: Content is protected !!
Scroll to Top