ಉಳ್ಳಾಲ: ವ್ಯಕ್ತಿಯ ಕೊಲೆ‌ ಮಾಡಲೆಂದು ಮನೆಗೆ ನುಗ್ಗಿದ ದುಷ್ಕರ್ಮಿಗಳು ► ಮನೆಯವರಿಗೆ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿ..!!!

(ನ್ಯೂಸ್ ಕಡಬ) newskadaba.com ಮಂಗಳೂರು,ಸೆ.03, ಪವಿತ್ರ ಉಳ್ಳಾಲ ದರ್ಗಾ ಸಮೀಪವಿರುವ ಮನೆಮನೆಯೊಂದಕ್ಕೆ ನುಗ್ಗಿದ 15 ಜನ ದುಷ್ಕರ್ಮಿಗಳ ತಂಡ ವೊಂದು ಮನೆಯವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಶನಿವಾರ ರಾತ್ರಿ 11.30 ರ ಸುಮಾರಿಗೆ ಈ ಘಟನೆ ಜರುಗಿದ್ದು, 15 ಜನರ ಗುಂಪೊಂದು ಲಾಂಗು ಮಚ್ಚು ಹಿಡಿದು ಮನೆ ಮಾಲೀಕ ಖಾಸಿಮ್, ಪತ್ನಿ ಮೈಮುನಾ ಮಕ್ಕಳಾದ ಸೋಯಲ್, ಅಮಿನ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಖಾಸಿಮ್‌ ರವರ ಮಗ ಹಂಝನನ್ನು ಕೊಲೆ ಮಾಡಲು ಬಂದಿದ್ದಾಗಿ ಹಲ್ಲೆಕೋರರು ಹೇಳಿದ್ದು, ಅತ ಮನೆಯಲ್ಲಿ ಇಲ್ಲದ ಕಾರಣ ಮನೆಯ ಸದಸ್ಯರ ಮೇಲೆ ಹಲ್ಲೆ ನಡೆಸಿ ಮನೆಯ ಕಿಟಕಿ, ಬಾಗಿಲುಗಳನ್ನು ಪುಡಿಗೈದಿದ್ದಾರೆ. ಕೆಲ ದಿನಗಳ ಹಿಂದೆ ಒಂದು ಗುಂಪಿನೊಂದಿಗೆ ಹಂಝ ಜಗಳವಾಡಿಕೊಂಡಿದ್ದು ಈ ಹಿನ್ನೆಲೆ ಈ ದಾಳಿ ನಡೆದಿದೆ ಎನ್ನಲಾಗಿದೆ.

Also Read  ಶ್ರೀನಗರದಲ್ಲಿ ಮತ್ತೆ ಅಟ್ಟಹಾಸ ಮೆರೆದ ಉಗ್ರರು

ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

error: Content is protected !!
Scroll to Top