ಭಾವುಕ ಭಕ್ತರಿಂದ ದೇವರ ದರ್ಶನ ➤ ಕೋಟ ಶ್ರೀನಿವಾಸ ಪೂಜಾರಿ

(ನ್ಯೂಸ್ ಕಡಬ) newskadaba.com ಮಂಗಳೂರು,ಜೂ.8: ಕೊರೊನಾ ಲಾಕ್ಡೌನ್ ಹಿನ್ನಲೆ ಮಾರ್ಚ್ ನಿಂದ ದೇವಾಲಯ, ಮಸೀದಿ, ಚರ್ಚ್ ಗಳನ್ನು ಮುಚ್ಚಲಾಗಿದ್ದು ಸೋಮವಾರದಂದು ಕೆಲವೊಂದು ದೇವಾಲಯ, ಚರ್ಚು, ಮಸೀದಿಗಳನ್ನು ಪುನಃ ತೆರೆಯಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಇಂದು ಬೆಳಿಗ್ಗೆ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥಿಸಿದರು.

ಕದ್ರಿ ಮಂಜುನಾಥಸ್ವಾಮಿ ದರ್ಶನ ಪಡೆದ ಬಳಿಕ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿಯವರು, ಇಂದು ನಮಗೆ ಸಂತಸದ ದಿನ. ಬಾವುಕ ಭಕ್ತರು ದರ್ಶನ ಮಾಡಲು ಕಾಯುತ್ತಿದ್ದರು. ರಾಜ್ಯಾದ್ಯಂತ ಇಂದು ದೇವಸ್ಥಾನಗಳು ತೆರೆದಿವೆ. ಸಾಮಾಜಿಕ ಅಂತರ ಕಾಯ್ದುಕೊಂಡು ದೇವರ ದರ್ಶನ ಮಾಡುತ್ತಿದ್ದಾರೆ. ನಾನು ಮಂಗಳೂರಿನ ಇತಿಹಾಸ ಪ್ರಸಿದ್ಧ ಕದ್ರಿ ಮಂಜುನಾಥಸ್ವಾಮಿ ದರ್ಶನ ಪಡೆದಿದ್ದೇನೆ ಎಂದರು. ಭಕ್ತರು ವಿಗ್ರಹ, ಕಂಬಗಳು, ಗೋಡೆಗಳು ಸೇರಿದಂತೆ ಯಾವುದನ್ನೂ ಮುಟ್ಟಬಾರದು, ತೀರ್ಥ ಪ್ರಸಾದ ಹಂಚಬಾರದು ಎಂದು ದೇವಾಲಯಗಳಿಗೆ ಆದೇಶಿಸಲಾಗಿದ್ದು ಸಾಮಾಜಿಕ ಅಂತರದೊಂದಿಗೆ ಮುಖಗವಸು ಧರಿಸುವುದು ಕಡ್ಡಾಯವಾಗಿದೆ. ಕದ್ರಿ ದೇವಾಲಯದಲ್ಲಿ ಸರ್ಕಾರದ ಸೂಚನೆಯಂತೆ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ಮುಂತಾದ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.

error: Content is protected !!

Join the Group

Join WhatsApp Group