ಕರಾವಳಿಯಲ್ಲಿ ಕೋವಿಡ್ ಆತಂಕ ➤ KSRTC, ಖಾಸಗಿ ಬಸ್ ಸಂಚಾರ ಅನುಮಾನ

(ನ್ಯೂಸ್ ಕಡಬ) newskadaba.com ಮಂಗಳೂರು,ಜೂ.6:  ಕರಾವಳಿಯಲ್ಲಿ ಕೋವಿಡ್ ಆತಂಕ ಸೃಷ್ಟಿಸುತ್ತಿದ್ದು, ಇಲ್ಲಿಂದ ದೂರ ಊರುಗಳಿಗೆ ಹವಾನಿಯಂತ್ರಿತ (ಎಸಿ) ಕೆಎಸ್ಸಾರ್ಟಿಸಿ ಮತ್ತು ಖಾಸಗಿ ಬಸ್ ಸಂಚಾರ ಸದ್ಯಕ್ಕೆ ಇರುವುದು ಅನುಮಾನ ವ್ಯಕ್ತವಾಗಿದೆ.

 

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಈ ಹಿಂದೆ ಪ್ರತೀ ದಿನ ಅಂತರ್ ಜಿಲ್ಲೆ ಮತ್ತು ಅಂತರ್ ರಾಜ್ಯಗಳಿಗೆ ಸುಮಾರು 50ಕ್ಕೂ ಮಿಕ್ಕಿ ಎಸಿ ಬಸ್‌ಗಳು ಸಂಚರಿಸುತ್ತಿದ್ದವು. ಮಂಗಳೂರು, ಪುತ್ತೂರು ವಿಭಾಗಗಳಿಂದ ನಾನ್ ಎಸಿ ಸ್ಲಿಪರ್ ಬಸ್ ಈಗಾಗಲೇ ಆರಂಭಗೊಂಡಿದೆ. ಧರ್ಮಸ್ಥಳ, ಸುಳ್ಯ ಮತ್ತು ಮಡಿಕೇರಿ ಡಿಪೋಗಳಿಂದಲೂ ಒಂದೊಂದು ಬಸ್ ಸಂಚರಿಸುತ್ತಿವೆ. ಬೆಂಗಳೂರು ನಗರದಲ್ಲಿ ಎಸಿ ಬಸ್ ಸೇವೆ ಆರಂಭಕ್ಕೆ ಸೂಚನೆ ನೀಡಿದ್ದರೂ ಮಂಗಳೂರು ವಿಭಾಗಕ್ಕೆ ಇನ್ನೂ ಆದೇಶ ಬಂದಿಲ್ಲ ಎಂದು ವಿಭಾಗೀಯ ಸಂಚಾರ ಅಧಿಕಾರಿ ಕಮಲ್ ಕುಮಾರ್ ತಿಳಿಸಿದ್ದಾರೆ.ಎರಡು ತಿಂಗಳ ಬಳಿಕ ಕೆಎಸ್ಸಾರ್ಟಿಸಿ ಶುಕ್ರವಾರದಿಂದ ರಾತ್ರಿ ಬಸ್ ಸೇವೆ ಆರಂಭಿಸಿದೆ. ಆದರೆ ಮಂಗಳೂರು ವಿಭಾಗದಲ್ಲಿ ಶನಿವಾರ ದಿಂದ ಬಸ್ ಸಂಚಾರ ಆರಂಭಗೊಳ್ಳಲಿದೆ. ಮಂಗಳೂರು ಕೆಎಎಸ್ಸಾರ್ಟಿಸಿ ವಿಭಾಗಗಳಾದ ಕುಂದಾಪುರ, ಉಡುಪಿ ಮತ್ತು ಮಂಗಳೂರು ಡಿಪೋಗಳಿಂದ ಶನಿವಾರದಿಂದ ಪ್ರತೀ ದಿನ ರಾತ್ರಿ 11 ಗಂಟೆಯವರೆಗೆ ದೂರದ ಊರುಗಳಿಗೆ ಬಸ್ ಕಾರ್ಯಾಚರಣೆ ನಡೆಸಲು ತೀರ್ಮಾನಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಈ ಹಿಂದೆ ರಾತ್ರಿ 9 ಗಂಟೆಯವರೆಗೆ ಬಸ್ ಸೇವೆ ವಿಸ್ತರಿಸಲಾಗಿತ್ತು. ಇದೀಗ 11 ಗಂಟೆಯವರೆಗೆ ಕಾರ್ಯಾಚರಣೆ ನಡೆ ಸಲು ನಿಗಮ ತೀರ್ಮಾನಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Also Read  ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ➤ ದಡ ಸೇರಿದ ಬೋಟುಗಳು

 

 

error: Content is protected !!
Scroll to Top