ಮಹಿಳೆಯೋರ್ವರಿಗೆ ಕೊರೋನಾ ಪಾಸಿಟಿವ್ ➤ ಉಪ್ಪಿನಂಗಡಿಯಲ್ಲಿ ಹೆಚ್ಚಿದ ಆತಂಕ

(ನ್ಯೂಸ್ ಕಡಬ) newskadaba.com.ಉಪ್ಪಿನಂಗಡಿ,ಜೂ.6: ಟ್ರಾವೆಲ್ ಹಿಸ್ಟರಿ ಸಿಗದ ಮಹಿಳೆಯೋರ್ವರಿಗೆ ಕೊರೋನಾ ಪಾಸಿಟಿವ್ ದೃಢವಾಗಿದ್ದು ಉಪ್ಪಿನಂಗಡಿ ನೆಕ್ಕಿಲಾಡಿ ಆತಂಕ ಮನೆ ಮಾಡಿದೆ. ಇವರು ನೆಕ್ಕಿಲಾಡಿಯ ಗ್ರಾಮದ ಶಾಂತಿನಗರ- ಅಂಬೇಲ ಮಧ್ಯೆಯ ಬೇರಿಕೆಯ ನಿವಾಸಿಯಾಗಿದ್ದಾರೆ. ಈ ಮಹಿಳೆಯು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಅನಾರೋಗ್ಯದ ಕಾರಣದಿಂದ ದಾಖಲಾಗಿದ್ದು, ಜ್ವರದ ಹಿನ್ನೆಲೆಯಲ್ಲಿ ಅಲ್ಲಿ ಅವರ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.

ಅದರ ವರದಿ ಶುಕ್ರವಾರ ಬಂದಿದ್ದು, ಈ ಸಂದರ್ಭ ಅವರಿಗೆ ಕೊರೋನಾ ಪಾಸಿಟಿವ್ ಇರುವುದು ದೃಢವಾಗಿದೆ.ಈ ಮಹಿಳೆಯ ಪತಿ ಅಡಿಕೆ ವ್ಯಾಪಾರಿಯಾಗಿದ್ದು, ಉಪ್ಪಿನಂಗಡಿಯಲ್ಲಿ ಅಂಗಡಿ ಹೊಂದಿದ್ದಾರೆ. ಆದುದರಿಂದ ಅವರು ಹಲವು ಜನರ ಜತೆ ವ್ಯವಹರಿಸಿರುವ ಸಾಧ್ಯತೆ ಇದೆ.ಸುದ್ದಿ ತಿಳಿದು ಇವರ ಮನೆಗೆ ಉಪ್ಪಿನಂಗಡಿ ಹೋಬಳಿ ಕಂದಾಯ ನಿರೀಕ್ಷಕ ಜಯವಿಕ್ರಮ್, 34 ನೆಕ್ಕಿಲಾಡಿ ಗ್ರಾಮಕರಣಿಕ ರಮಾನಂದ ಚಕ್ಕಡಿ ಭೇಟಿ ನೀಡಿದ್ದಾರೆ. ಮನೆಯಲ್ಲಿದ್ದ ಇವರ ಪತಿ ಹಾಗೂ ಇಬ್ಬರು ಮಕ್ಕಳಿಗೆ ಮನೆಯಿಂದ ಹೊರಗೆ ಬರದಂತೆ ಕ್ವಾರಂಟೈನ್ ಸೂಚನೆ ನೀಡಿದ್ದಾರೆ.ಈ ಮಹಿಳೆಯು ಮನೆಯಲ್ಲಿಯೇ ಇದ್ದು ಇವರಿಗೆ ಕೊರೋನಾ ಯಾವ ಮೂಲದಿಂದ ಬಂದಿದೆ ಎಂಬ ಇನ್ನೂ ಸ್ಪಷ್ಟವಾಗಿಲ್ಲ.

Also Read  ಉಡುಪಿ: ಮಲ್ಪೆ ಹಲ್ಲೆ ಕೇಸ್; ದೌರ್ಜನ್ಯ ಪ್ರಕರಣ ರದ್ದುಗೊಳಿಸುವಂತೆ ಸಂತ್ರಸ್ತೆ ಮನವಿ

 

 

error: Content is protected !!
Scroll to Top