ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಓಪನ್ ➤ ನಿಯಮ ಪಾಲನೆ ಕಡ್ಡಾಯ

(ನ್ಯೂಸ್ ಕಡಬ) newskadaba.com.ಕುಕ್ಕೆ ಸುಬ್ರಹ್ಮಣ್ಯ ,ಜೂ.6: ಸೋಮವಾರದಿಂದ ರಾಜ್ಯದಾದ್ಯಂತ ದೇವಾಲಯಗಳು ಭಕ್ತರಿಗಾಗಿ ತೆರೆಯಲಿದೆ. ಹಾಗೆಯೇ ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರವಾದ ದಕ್ಷಿಣಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರಿಗೆ ದೇವರ ದರ್ಶನಕ್ಕಾಗಿ ಎಲ್ಲಾ ವ್ಯವಸ್ಥೆ ಮಾಡಲಾಗುತ್ತಿದೆ. ರಾಜ್ಯಾದ್ಯಾಂತ ಕೋರೋನಾ ಅಟ್ಟಹಾಸಕ್ಕೆ ಬಹುತೇಕ ಎಲ್ಲಾ ದೇವಾಲಗಳು ಸಂಪೂರ್ಣವಾಗಿ ಬಂದ್ ಮಾಡಲು ಸರ್ಕಾರ ಆದೇಶ ಹೊರಡಿಸಿತ್ತು. ಸತತ 2 ತಿಂಗಳ ಲಾಕ್ ಡೌನ್ ಬಳಿಕ ಈಗ ಮತ್ತೇ ಸರ್ಕಾರ ಹಲವು ಮುಂಜಾಗ್ರತ ಕ್ರಮಗಳನ್ನ ಕೈಗೊಂಡು ದೇವಾಲಯಗಳ ಬಾಗಿಲು ತೆರೆಯಲು ಆದೇಶ ಹೊರಡಿಸಿದೆ. ರಾಜ್ರದ ನಂಬರ್ ಒನ್ ದೇವಾಲಯ ಕುಕ್ಕೆ ಸುಬ್ರಮಹ್ಮಣ್ಯಕ್ಕೆ ಈಗಾಗಲೇ ಭಕ್ರತ ಆಗಮನ ಆರಂಭವಾಗಿದೆ.

 

 

ಹೌದು, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಹೊರಾಂಗಣದಲ್ಲಿ ಭಕ್ತರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪೇಂಟ್ನಿಂದ ಒಂದು ಮೀಟರ್ ಅಂತರದ ಚೌಕಟ್ಟುಗಳನ್ನೂ ರಚಿಸಲಾಗಿದೆ. ಥರ್ಮಲ್ ಸ್ಕ್ರೀನಿಂಗ್ಗೂ ವ್ಯವಸ್ಥೆಗಳನ್ನು ಮಾಡಲಾಗಿದೆದೇವಸ್ಥಾನದ ಒಳಗೆ ಬರುವ ಎಲ್ಲಾ ಭಕ್ತರೂ ಕಡ್ಡಾಯವಾಗಿ ತಮ್ಮ ಕೈ-ಕಾಲುಗಳನ್ನು ಶುಚಿಗೊಳಿಸಿದ ಬಳಿಕ ದೇವಸ್ಥಾನದ ಮುಖ್ಯ ದ್ವಾರದ ಬಳಿ ಇಡಲಾಗುವ ಸ್ಯಾನಿಟೈಸರ್ ಬಳಸಬೇಕಿದೆ. ಅಲ್ಲದೆ ಕ್ಷೇತ್ರದ ಒಳಗೆ ಪ್ರವೇಶಿಸುವ ಪ್ರತಿಯೊಬ್ಬರೂ ಮಾಸ್ಕ್ ಧರಿಸುವಂತೆಯೂ ಸೂಚಿಸಲಾಗಿದೆ. ಜೂ. 8ರಿಂದ ಕ್ಷೇತ್ರ ತೆರೆಯುವ ಹಿನ್ನೆಲೆಯಲ್ಲಿ ಶುಕ್ರವಾರದಿಂದಲೇ ಭಕ್ತಾದಿಗಳು ದೇವಸ್ಥಾನದ ಗೋಪುರದ ಬಳಿ ಬಂದು ದೇವರಿಗೆ ಪ್ರಾರ್ಥಿಸಲಾರಂಭಿಸಿದ್ದಾರೆ. ಧರ್ಮಸ್ಥಳಕ್ಕೆ ಬಂದಿರುವ ಭಕ್ತರು, ಸುಬ್ರಹ್ಮಣ್ಯಕ್ಕೂ ಬಂದು ಗೋಪುರದಿಂದಲೇ ದೇವರಿಗೆ ನಮಿಸಿ ಹೊರಡುತ್ತಿದ್ದಾರೆ. ಸೋಮವಾರದಿಂದ ಭಕ್ತರಿಗೆ ಸುಬ್ರಹ್ಮಣ್ಯನ ದರ್ಶನ ಭಾಗ್ಯ ಲಭಿಸಲಿದೆ.

Also Read  ರಾಜ್ಯದಲ್ಲಿ 2ನೇ ಹಂತದ ಅನ್ ಲಾಕ್ ಘೋಷಣೆ ಮಾಡಿದ BSY

 

 

error: Content is protected !!
Scroll to Top